ಹುಬ್ಬಳ್ಳಿ: ಬೆಂಗಳೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ 1.53 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನವಾಗಿದೆ. ಕಲಬುರಗಿ ಮೂಲದ ಚಂದ್ರಕಾಂತ ಮಡಿವಾಳ ಎಂಬುವರಿಗೆ ಸೇರಿದ 38.4 ಗ್ರಾಂ ತೂಕದ ಆಭರಣ ಕಳ್ಳತನವಾಗಿದೆ. ಧಾರವಾಡ ರೈಲ್ವೆ ನಿಲ್ದಾಣ ಸಮೀಪವಿದ್ದಾಗ ಈ ಘಟನೆ ನಡೆದಿದೆ ಎಂದು ಚಂದ್ರಕಾಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.