1.50 ಲಕ್ಷ ರೂ. ಮೌಲ್ಯದ ಮಾಂಗಲ್ಯ ಕಳ್ಳತನ

crime
Published on

ಹುಬ್ಬಳ್ಳಿ: ಇಲ್ಲಿನ ಹೊಸೂರು ಬಸ್ ನಿಲ್ದಾಣದಲ್ಲಿ ಲಕ್ಷೆ್ಮೕಶ್ವರ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಕೊರಳಲ್ಲಿದ್ದ 1.50 ಲಕ್ಷ ರೂ. ಮೌಲ್ಯದ 35 ಗ್ರಾಂ ತೂಕದ ಮಾಂಗಲ್ಯ ಕಳ್ಳತನವಾದ ಘಟನೆ ಇತ್ತೀಚೆಗೆ ನಡೆದಿದೆ.

ಮಹಿಳೆಯು ಶಿರಗುಪ್ಪಿಗೆ ಹೋಗಿ ಮರಳಿ ಹುಬ್ಬಳ್ಳಿಯಿಂದ ಲಕ್ಷೆ್ಮೕಶ್ವರಕ್ಕೆ ತೆರಳಲು ಸಂಜೆ 7ರ ಸುಮಾರಿಗೆ ಬಸ್ ಹತ್ತುವ ವೇಳೆ ಕಳ್ಳತನವಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net