ದೇವಸ್ಥಾನ ಜೀರ್ಣೋದ್ಧಾರಕ್ಕೆ 1.50 ಲಕ್ಷ ರೂ.

Published on

ಸಿರಿಗೇರಿ: ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ ಸದಾ ಸಿದ್ಧವಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.

ಕೊಂಚಿಗೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 1.50 ಲಕ್ಷ ರೂ. ಚೆಕ್‌ಅನ್ನು ದೇವಸ್ಥಾನ ಸಮಿತಿಗೆ ಬುಧವಾರ ವಿತರಿಸಿ ಮಾತನಾಡಿದರು. ಗ್ರಾಮಗಳಲ್ಲಿ ಜನರು ಸುಖ-ಶಾಂತಿ ನೆಮ್ಮದಿಯಿಂದ ಜೀವಿಸಲ ದೇವಸ್ಥಾನಗಳು ಮುಖ್ಯ ಪಾತ್ರ ವಹಿಸುತ್ತವೆ. ಉತ್ತಮ ವಾಸ್ತು-ಶಿಲ್ಪದೊಂದಿಗೆ ಶ್ರೀಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಮುಂದುವರೆಯಲಿ, ಗ್ರಾಮದಲ್ಲಿ ಮಳೆ-ಬೆಳೆ ಜನರ ಜೀವನ ಸಮೃದ್ಧವಾಗಿರಲಿ ಎಂದು ಹೇಳಿದರು.

ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಣ್ಣ ಮಾತನಾಡಿ, ದೇವಸ್ಥಾನಕ್ಕೆ ಸಹಾಯಧನ ದೊರೆತಿರುವುದು ಒಳಿತಿಗಾಗಿ, ಅಭಿವೃದ್ಧಿಗಾಗಿ. ಗ್ರಾಮಕ್ಕೆ ಧರ್ಮಸ್ಥಳದ ಪ್ರಸಾದ ತಲುಪಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಪಂ ಮಾಜಿ ಅಧ್ಯಕ್ಷ ಕಣರ್ಂ ಸಿದ್ದನಗೌಡ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಸವರಾಜ, ವಲಯ ಮೇಲ್ವಿಚಾರಕ ಹನುಮಂತಪ್ಪ, ಸೇವಾ ಪ್ರತಿನಿಧಿ ಹೊನ್ನೂರಸ್ವಾಮಿ, ಕರಿಬಸಪ್ಪ, ಹೊನ್ನೂರಪ್ಪ, ಹಂಪಣ್ಣ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net