

ಶಿವಮೊಗ್ಗ: ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಗರ ಪಾಲಿಕೆ ಸದಸ್ಯರ ನಿಯೋಗ ಶಿವಮೊಗ್ಗ ದಸರಾಕ್ಕೆ 1.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಜಂಬೂ ಸವಾರಿಗೆ ಸಕ್ರೆಬೈಲು ಬಿಡಾರದ ಮೂರು ಆನೆಗಳನ್ನು ಒದಗಿಸಲು ಅರಣ್ಯ ಇಲಾಖೆ ಅಽಕಾರಿಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಶಿವಮೊಗ್ಗದಲ್ಲೂ ಪ್ರತಿ ವರ್ಷ ಮೈಸೂರು ಮಾದರಿಯಲ್ಲೇ ದಸರಾ ಉತ್ಸವ ನಡೆಸಲಾಗುತ್ತದೆ. ವಿವಿಧ ಬಗೆಯ ಸ್ಪರ್ಧೆಗಳು ಮನರಂಜನೆ ಕಾರ್ಯಕ್ರಮಗಳಿರುತ್ತವೆ. ಖ್ಯಾತ ಕಲಾವಿದರು ಇಲ್ಲಿಗೆ ಬರುತ್ತಾರೆ. ಹೀಗಾಗಿ ಸರ್ಕಾರ ಪ್ರತಿವರ್ಷದಂತೆ ಈ ವರ್ಷವೂ ಅನುದಾನ ಬಿಡುಗಡೆ ಮಾಡಿ ದಸರಾಕ್ಕೆ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
ಹಲವು ವರ್ಷಗಳಿಂದ ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಸಕ್ರೆಬೈಲು ಬಿಡಾರದ ಆನೆಗಳನ್ನು ಕಳುಹಿಸಲಾಗುತ್ತ್ತಿದೆ. ಈ ವರ್ಷವೂ ಆನೆಗಳನ್ನು ಕಳುಹಿಸಲು ಸರ್ಕಾರದ ಮಟ್ಟದಲ್ಲಿ ಅನುಮತಿ ನೀಡಬೇಕು. ಈಗಾಗಲೇ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎ-ï ಪ್ರಸನ್ನಕೃಷ್ಣ ಪಟಗಾರ್ ಅವರಿಗೆ ಪತ್ರ ಬರೆದು ಆನೆಗಳನ್ನು ಕಳುಹಿಸುವಂತೆ ಕೋರಲಾಗಿದೆ. ಇದಕ್ಕೆ ಸರ್ಕಾರದ ಸಹಕಾರವೂ ಅಗತ್ಯ ಎಂದರು.
ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷಿ÷್ಮÃ ಶಂಕರ ನಾಯ್ಕ್, ಆಡಳಿತ ಪಕ್ಷದ ನಾಯಕ e್ಞÁನೇಶ್ವರ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ನಾಗರಾಜ್ ಕಂಕಾರಿ, ಇ.ವಿಶ್ವಾಸ್, ಆರ್.ಸಿ.ನಾಯ್ಕ್, ರೇಖಾ ರಂಗನಾಥ್ ಮುಂತಾದವರು ನಿಯೋಗದಲ್ಲಿದ್ದರು.
ಬಿಲ್ ನೀಡಲು ಅನುದಾನ ಕೊಡಿ
ಪಾಲಿಕೆ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಎಸ್‌ಎ-ïಸಿ ವಿಶೇಷ ಅನುದಾನದಡಿ 20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಽಕಾರಿಗಳು 54 ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದರು. ಇವುಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಕಾಮಗಾರಿಗಳು ಈಗಾಗಲೇ ಮುಕ್ತಾಯವಾಗಿವೆ. ಇದಕ್ಕಾಗಿ ಬಿಲ್ ಪಾವತಿಸಲು 82.55ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಈಗ ಉಳಿದ ಅನುದಾನವನ್ನೂ ಒದಗಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಯಿತು.
ಬಾಕಿ ಅನುದಾನ ಬಿಡುಗಡೆ ಸಂಬAಧ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದೊಂದಿಗೆ ಹಲವು ಬಾರಿ ಪತ್ರ ವ್ಯವಹಾರ ಮಾಡಲಾಗಿದೆ. ಆದರೂ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಬಿಲ್ ಪಾವತಿಗೆ ಹಾಗೂ ಉಳಿದ ಕೆಲಸ ಮುಂದುವರಿಸಲು ಸಮಸ್ಯೆಯಾಗಿದೆ. ಅನುದಾನ ಬಿಡುಗಡೆಗೆ ಅಽಕಾರಿಗಳಿಗೆ ಸೂಚನೆ ನೀಡಬೇಕೆಂದು ನಿಯೋಗದಲ್ಲಿದ್ದವರು ಒತ್ತಾಯಿಸಿದರು.