

ಮಂಗಳೂರು: ನಗರದ ನಿವಾಸಿಯೊಬ್ಬರು ಷೇರು ಖರೀದಿಸಿ ಲಾಭಗಳಿಸುವ ಉದ್ದೇಶದಲ್ಲಿ 1.50 ಕೋಟಿ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಣ ಕಳೆದುಕೊಂಡ ವ್ಯಕ್ತಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನೋಡುವಾಗ ’ಒಛ್ಛ್ಛಿಛ್ಟಿಜಿಛಿ ಡಿಛಿಚ್ಝಠಿ ಞ್ಠ್ಝಠಿಜಿಟ್ಝಜ್ಚಿಠಿಜಿಟ್ಞ ಕ್ಝೃಚ್ಞ’ ಎಂಬ ಪೋಸ್ಟ್ ನೋಡಿ ಅದರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಷೇರ್ ಗಳನ್ನು ಖರೀದಿಸಿ ಲಾಭ ಗಳಿಸುವ ಇರಾದೆಯಿಂದ ಅಪರಿಚಿತ ವ್ಯಕ್ತಿಯು ನೀಡಿದ ಮಾಹಿತಿಯಂತೆ ಇವರು ಮೇ 28 ರಿಂದ ಜೂ.28ರ ತನಕ ಹಂತ ಹಂತವಾಗಿ ತಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯಿಂದ 73,00,000 ರೂ. ಮತ್ತು ಗುರುಪುರ ವ್ಯವಸಾಯ ಸಹಕಾರಿ ಸಂಘ ನಿಯಮಿತ ವಾಮಂಜೂರು ಶಾಖೆ ಖಾತೆಯಿಂದ 77,00,000 ರೂ. ಒಟ್ಟು 1.50 ಕೋಟಿ ರೂ.ಗಳನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ ಎನ್ನಲಾಗಿದೆ.
ಈಬಗ್ಗೆ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.