1.48 ಲಕ್ಷ ರೂ. ನಗದು ಕಳವು

crime
Published on

ಹುಬ್ಬಳ್ಳಿ: ಇಲ್ಲಿನ ಜನತಾ ಬಜಾರ ಹತ್ತಿರದ ಮಧುರಾ ಪ್ಲಾಜಾದಲ್ಲಿನ ಪಂಪ್‌ಸೆಟ್ ಅಂಗಡಿ ಬಾಗಿಲು ಮುರಿದ ಕಳ್ಳರು 1.48 ಲಕ್ಷ ರೂ. ನಗದು ಕಳವು ಮಾಡಿದ ಘಟನೆ ನಡೆದಿದೆ.

ನಗರದ ಜಗದೀಶ ನರೇಗಲ್ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಕಳವಾಗಿದೆ. ಫೆ. 7ರಂದು ಮಧ್ಯಾಹ್ನ ವೇಳೆಯಲ್ಲಿಯೇ ಅಂಗಡಿ ಬಾಗಿಲು ಮುರಿದು ಒಳನುಗ್ಗಿ ಡ್ರಾದಲ್ಲಿದ್ದ 1.48 ಲಕ್ಷ ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net