ದಾಖಲೆಯಿಲ್ಲದ ಸಾಗಿಸುತ್ತಿದ್ದ 1.47 ಲಕ್ಷ ರೂ. ವಶ

Published on

ವಿರಾಜಪೇಟೆ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1,47,060 ರೂ. ನಗರದನ್ನು ಸಮೀಪದ ಪೆರುಂಬಾಡಿಯಲ್ಲಿನ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಕೇರಳ ಗಡಿಭಾಗವಾದ ಪೆರುಂಬಾಡಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿರುವಾಗ ಕೇರಳದ ಇರಿಟಿಯಿಂದ ಮೈಸೂರಿಗೆ ತೆರಳುತ್ತಿದ್ದ ಕಾರೊಂದರಲ್ಲಿ ಮಂಗಳವಾರ ನಗದು ಪತ್ತೆಯಾಗಿದೆ. ಅಜೇಯನ್ ಎಂಬುವರ ಬಳಿ ದಾಖಲೆಯಿಲ್ಲದ ನಗದನ್ನು ವಶಕ್ಕೆ ಪಡೆದ ಅಧಿಕಾರಿಗಳು ಉಪ ಖಜಾನೆಗೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಪಾಸಣಾ ಕೇಂದ್ರದಲ್ಲಿ ಶಿಕ್ಷಣ ಇಲಾಖೆಯ ಸಿಆರ್‌ಪಿ ವೆಂಕಟೇಶ್, ಕೃಷಿ ಇಲಾಖೆಯ ಅಶ್ವಿನ್‌ಕುಮಾರ್, ಅಬಕಾರಿ ಉಪನಿರೀಕ್ಷಕ ಲತೇಶ್ ಮತ್ತು ಕಾನ್‌ಸ್ಟೇಬಲ್ ಬಿ.ವಿ.ಸತೀಶ್ ಕಾರ್ಯನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net