ಆಯನೂರು ಕೃಷಿ ಸಂಘಕ್ಕೆ 1.46 ಲಕ್ಷ ರೂ. ಲಾಭ

16 anr 5
ಆಯನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಗೆ ವೈ.ರಾಜಾನಾಯ್ಕ, ದಾದಾಪೀರ್, ವಿ.ಜಿ.ಮಹೇಶ್ವರಪ್ಪ ಚಾಲನೆ ನೀಡಿದರು. ಎಚ್.ಮಂಜಪ್ಪ, ಎನ್.ಡಿ.ಯಲ್ಲಪ್ಪ, ಎ.ವಿ.ರೇಣುಕಪ್ಪ ಇತರರಿದ್ದರು.
Published on

ಆಯನೂರು: ಆಯನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 1.46 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ವೈ.ರಾಜಾನಾಯ್ಕ ಹೇಳಿದರು.

ಶನಿವಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, 1,544 ಷೇರುದಾರರಿದ್ದಾರೆ. ಮುಂದಿನ ದಿನಗಳಲ್ಲಿ ಬಂಗಾರದ ಅಡಮಾನ ಸಾಲ, ಠೇವಣಿ ಆಧಾರಿತ ಸಾಲ, ಪಿಗ್ಮಿ ಸಂಗ್ರಹ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದಿಂದ ಸಂಘಕ್ಕೆ ಗ್ಯಾಸ್ ಏಜೆನ್ಸಿ ಹಾಗೂ ಪೆಟ್ರೋಲ್ ಬಂಕ್ ಸ್ಥಾಪನೆಗೆ ಆದೇಶ ಲಭಿಸಿದೆ. ಸ್ಥಳ ದೊರೆತರೆ ಕೂಡಲೆ ಯೋಜನೆ ಕಾರ್ಯರೂಪಕ್ಕೆ ತರಬಹುದು ಎಂದರು. ಮಳೆ ಕೊರತೆಯಿಂದ ಜೋಳ, ಭತ್ತ ಕೈಗೆ ಸಿಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಕಳೆದ 15 ವರ್ಷಗಳಿಂದ ಸೊಸೈಟಿಯ ವ್ಯಾಪ್ತಿಯಲ್ಲಿನ ರೈತರಿಗ ಯಾವುದೇ ಬೆಳೆ ವಿಮೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆಳೆ ಪರಿಹಾರಕ್ಕೆ ಸೊಸೈಟಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸುವಂತೆ ಷೇರುದಾರರು ಆಗ್ರಹಿಸಿದರು.
ಸಂಘ ಕಳೆದ ಸಾಲಿನಲ್ಲಿ 1.20 ಕೋಟಿ ರೂ. ಸಾಲ ವಿತರಿಸಿತ್ತು. ಕಚೇರಿಗಳ ವ್ಯವಸ್ಥೆಗಳು ಕಂಪ್ಯೂಟರೀಕರಣ ಆಗಿರುವುದರಿಂದ ದಾಖಲೆಗಳನ್ನು ಸರಿಪಡಿಸಿಕೊಳ್ಳಿ. ಹೆಸರು ವ್ಯತ್ಯಾಸವಿದ್ದರೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಯಶಸ್ವಿನಿ ಯೋಜನೆ ಜಾರಿಗೊಳಿಸಿ ನಿಲ್ಲಿಸುವ ಕೆಲಸವಾಗುತ್ತಿದೆ. ಕಳೆದ ಬಾರಿ ರೈತರು ಯೋಜನೆಗೆ ಹಣ ಕಟ್ಟಿದ್ದರು. ಹಿಂದಿನ ಸಚಿವರು ಯೋಜನೆಯನ್ನು ಯಶಸ್ವಿ ಆಗಿ ಜಾರಿಗೊಳಿಸಲಿಲ್ಲ. ಹೊಸ ಸಚಿವರು ಸರಿಪಡಿಸುವ ಭರವಸೆ ನೀಡಿದ್ದಾರೆ. ಹಣ ಕಟ್ಟಿದ್ದರೂ ಸೌಲಭ್ಯ ಇಲ್ಲದಂತಾಗಿದೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಸಂಘದ ಮಾಜಿ ಅಧ್ಯಕ್ಷ ವಿ.ಜಿ.ಮಹೇಶ್ವರಪ್ಪ ಆಗ್ರಹಿಸಿದರು.
ಉಪಾಧ್ಯಕ್ಷ ದಾದಾಪೀರ್, ನಿರ್ದೇಶಕರಾದ ಎಚ್.ಮಂಜಪ್ಪ, ಎನ್.ಡಿ.ಯಲ್ಲಪ್ಪ, ಎ.ವಿ.ರೇಣುಕಪ್ಪ, ಎ.ಟಿ.ಕೃಷ್ಣಮೂರ್ತಿ, ಪಿ.ಮಂಜಪ್ಪ, ಸಿ.ಎಂ.ಅಶೋಕ, ದಿವಾಕರಪ್ಪ, ಎನ್.ಪ್ರಭಾವತಿ, ವೈ.ಚಂದ್ರಕಲಾ, ವಿ.ಎಂ.ಆದರ್ಶ, ಕಾರ್ಯದರ್ಶಿ ಬಿ.ನಾಗರಾಜ್, ಷೇರುದಾರರಾದ ಜಯರಾಂ ನಾಯ್ಕ, ವಿ.ಜಿ.ಮಹೇಶ್ವರಪ್ಪ, ಧರ್ಮನಾಯ್ಕ, ಶಿವಾನಂದಪ್ಪ, ಕಿರಣ್ ಕುಮಾರ್, ಲೋಹಿತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net