1.45 ಲಕ್ಷ ರೂ. ಮೌಲ್ಯದ ಆಭರಣ ಪಡೆದು ವಂಚನೆ

crime
Published on

ಹುಬ್ಬಳ್ಳಿ: ಹಳೆಯ ಚಿನ್ನಾಭರಣ ತೊಳೆದುಕೊಡುವ ನೆಪದಲ್ಲಿ ಇಬ್ಬರು ಅಪರಿಚಿತರು, ನಗರದ ಜೋಳದ ಓಣಿಯ ಮಹಿಳೆಯಿಂದ 1.45 ಲಕ್ಷ ರೂ. ಮೌಲ್ಯದ ಆಭರಣ ಪಡೆದು ವಂಚಿಸಿದ್ದಾರೆ.

ಮಧ್ಯಾಹ್ನ ಮನೆಯ ಹತ್ತಿರ ಬಂದ ಅಪರಿಚಿತರು, ಹಳೆಯ ಬಂಗಾರ ತೊಳೆದುಕೊಡುವ ನೆಪದಲ್ಲಿ ನಾಲ್ಕು ತೊಲ ಮಂಗಳಸೂತ್ರ, ಒಂದು ತೊಲ ಚಿನ್ನದ ಸರ ಪಡೆದಿದ್ದಾರೆ. ಮೊದಲು ತಾಮ್ರದ ಚೊಂಬು, ಕಾಲು ಚೈನ್ ತೊಳೆದುಕೊಟ್ಟು ನಂಬಿಕೆ ಬರುವಂತೆ ಮಾಡಿದ್ದಾರೆ. ನಂತರ ನಾಲ್ಕೂವರೆ ತೊಲ ಆಭರಣ ಪಡೆದು ಕುಕ್ಕರ್​ನಲ್ಲಿ ಹಾಕಿ ಕುದಿಸಲು ಹೇಳಿದ್ದಾರೆ. ಬಂಗಾರ ಕಪ್ಪಾಗಿದ್ದರಿಂದ ಅದಕ್ಕೆ ಅರಿಶಿಣ ಪುಡಿ ಮತ್ತು ಬಿಳಿ ಪೌಡರ್ ಹಾಕಿ ಕೊಟ್ಟು ಕುದಿಸಿ ಎಂದು ಹೇಳಿ ಆಭರಣದೊಂದಿಗೆ ಪರಾರಿಯಾಗಿದ್ದಾರೆ. ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net