

ಹುಬ್ಬಳ್ಳಿ: ಕೆವೈಸಿ ಅಪ್ಡೇಟ್ ಮಾಡುವುದಾಗಿ ನಂಬಿಸಿದ ಅಶೋಕ ಎನ್ನುವ ವ್ಯಕ್ತಿ, ಹಳೇ ಹುಬ್ಬಳ್ಳಿ ತಿಮ್ಮಸಾಗರ ರಸ್ತೆಯ ನಾಗೇಶ ಎನ್ನುವರಿಂದ 1.43 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿರುವ ಕುರಿತು ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಬ್ಯಾಂಕೊಂದರ ಶಾಖೆಯ ಅಶೋಕ ಎಂಬ ವ್ಯಕ್ತಿ ನಾಗೇಶನ ಮೊಬೈಲ್ ಫೋನ್ಗೆ ಎಸ್ಎಂಎಸ್ ಕಳುಹಿಸಿದ್ದ. ನಿಮ್ಮ ಕೆವೈಸಿ ಅಪ್ಡೇಟ್ ಆಗಿಲ್ಲ. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆ ಬಂದ್ ಆಗಿದೆ. ಈ ಸಂಖ್ಯೆಗೆ ಕರೆ ಮಾಡಿ ಎಂದು ಮೊಬೈಲ್ ಫೋನ್ ನಂಬರ್ ಕೊಟ್ಟು, ಲಿಂಕ್ ಮತ್ತು ಎಸ್ಎಂಎಸ್ ಕಳಹಿಸಿದ್ದ. ನಂತರ ನಾಗೇಶನಿಂದ ಒಟಿಪಿ ಪಡೆದ. ತಾನು ಬ್ಯಾಂಕ್ ಮ್ಯಾನೇಜರ್ ಎಂದ ಅಶೋಕ, ಪೆನ್ಷನ್ ವಿಷಯಕ್ಕೆ ನಮ್ಮ ಬ್ಯಾಂಕ್ಗೆ ಬಂದಾಗ ನಾನು ನಿಮ್ಮನ್ನು ನೋಡಿದ್ದೇನೆ ಎಂದು ನಾಗೇಶನನ್ನು ನಂಬಿಸಿದ.
ಒಟಿಪಿ ಪಡೆದು ಅಶೋಕ, ಹಣ ವಿತ್ಡ್ರಾ ಮಾಡಿಕೊಂಡಿದ್ದಾನೆ ಎಂದು ಬ್ಯಾಂಕ್ನಿಂದ ತಿಳಿದಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ನಾಗೇಶ ಅವರು ದೂರು ನೀಡಿದ್ದಾರೆ.