1.40 ಕೋಟಿ ರೂ. ಮೌಲ್ಯದ ಮದ್ಯ ನಾಶ

18Manju13-web
ಖಾನಾಪುರ ತಾಲೂಕಿನ ಹೊನಕಲ್ಲ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುರುವಾರ ಜಪ್ತಿ ಮಾಡಿದ ಮದ್ಯವನ್ನು ಅಬಕಾರಿ ಅಧಿಕಾರಿಗಳು ನಾಶಪಡಿಸಿದರು. ಎಂ.ವನಜಾಕ್ಷಿ, ರವಿ ಮುರಗೋಡ, ರವಿ ಹೊಸಳ್ಳಿ, ಮಲ್ಲೇಶ ಉಪ್ಪಾರ ಇತರರಿದ್ದರು.
Published on

ಖಾನಾಪುರ: ಅಕ್ರಮ ಸಾಗಣೆ ಹಾಗೂ ಮಾರಾಟ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 1.40 ಕೋಟಿ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ತಾಲೂಕಿನ ಹೊನಕಲ್ಲ ಗ್ರಾಮದಲ್ಲಿ ನಾಶಪಡಿಸಲಾಯಿತು ಎಂದು ಅಬಕಾರಿ ಬೆಳಗಾವಿ ದಕ್ಷಿಣ ಉಪ ಆಯುಕ್ತ ಎಂ.ವನಜಾಕ್ಷಿ ತಿಳಿಸಿದರು.

ಖಾನಾಪುರ ವಲಯ ವ್ಯಾಪ್ತಿಯಲ್ಲಿ 2023 ಡಿಸೆಂಬರ್‌ನಿಂದ 2024 ಜನವರಿವರೆಗೆ ದಾಖಲಾಗಿದ್ದ 72 ಪ್ರಕರಣಗಳಲ್ಲಿ 1,150 ಬಾಕ್ಸ್‌ಗಳಲ್ಲಿನ 10,300 ಗೋವಾ ಲೀಟರ್ ಮದ್ಯ, 135 ಲೀಟರ್ ಬಿಯರ್ ಹಾಗೂ 130 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಳ್ಳಲಾಗಿತ್ತು. ಆ ಮದ್ಯವನ್ನು ಪರಿಸರಕ್ಕೆ ಯಾವುದೇ ಹಾನಿ ಆಗದಂತೆ ಹೊನಕಲ್ಲ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಾಶ ಪಡಿಸಲಾಗಿದೆ ಎಂದು ವಿವರಿಸಿದರು.

ಅಬಕಾರಿ ಉಪ ಅಧೀಕ್ಷಕ ರವಿ ಮುರಗೋಡ, ರವಿ ಹೊಸಳ್ಳಿ, ವಲಯ ನಿರೀಕ್ಷಕ ಮಲ್ಲೇಶ ಉಪ್ಪಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net