1.39 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

06 LXR- 3- CRIME
ಬಂಧಿತ ಆರೋಪಿಗಳು
Published on

ಲಕ್ಷ್ಮೇಶ್ವರ: ಪಟ್ಟಣದ ಪೊಲೀಸರು ಕಳ್ಳರಿಬ್ಬರನ್ನು ಬಂಧಿಸಿ, 1.39 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮಗೇರಿ ಪು.ಬಡ್ನಿಯಲ್ಲಿ ಕಳ್ಳತನ ಮಾಡಿದ್ದ ಹನುಮಂತ ಕುಂಚಿಕೊರವರ, ಮಂಜುನಾಥ ಬಿಸಕಲ್ಲವಡ್ಡರ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ಬಂಗಾರದ ಕಿವಿಯೋಲೆ, ಬೆಳ್ಳಿ ಗೆಜ್ಜೆ, ಬೆಳ್ಳಿ ಒಡವೆ, ಚಿನ್ನದ ಸರ ಸೇರಿ ಒಟ್ಟು 1.39 ಲಕ್ಷ ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಯೂಸೆಪ್ ಜಮೂಲಾ, ಕ್ರೈಂ ಪಿಎಸ್‌ಐ ವಿ.ಜಿ. ಪವಾರ ನೇತೃತ್ವದಲ್ಲಿ ಕಳ್ಳರನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್‌ಐಗಳಾದ ಎನ್.ಎ. ಮೌಲ್ವಿ, ಟಿ.ಕೆ. ರಾಠೋಡ, ವೈ.ಎಸ್. ಕುಬಿಹಾಳ, ಜಿ.ಎಂ. ಬೂದಿಹಾಳ, ಸಿಬ್ಬಂದಿ ಎಂ.ಎ. ಶೇಕ್, ಎಂ.ಡಿ. ಲಮಾಣಿ, ಎಂ. ಎಸ್. ಬಳ್ಳಾರಿ, ಸಿ. ಎಸ್. ಮಠಪತಿ, ಡಿ. ಎಸ್. ನದಾಫ್, ಜಿ. ಆರ್. ಗ್ರಾಮ ಪುರೋಹಿತ, ಎಚ್.ಐ. ಕಲ್ಲಣ್ಣವರ ಸಂಜೀವ ಕೊರಡೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net