ಬ್ಯಾಡಗಿ ಮಾರುಕಟ್ಟೆಗೆ 1.36 ಲಕ್ಷ ಚೀಲ ಮೆಣಸಿನಕಾಯಿ ಆವಕ

4 Byadgi 2 -NEW
Published on

ಬ್ಯಾಡಗಿ: ಇಲ್ಲಿನ ಮಾರುಕಟ್ಟೆಗೆ ಗುರುವಾರ 1,36,173 ಚೀಲ ಮೆಣಸಿನಕಾಯಿ ಆವಕವಾಗಿದೆ ಎಂದು ಮಾರುಕಟ್ಟೆ ಕಾರ್ಯದರ್ಶಿ ಎಸ್.ಬಿ.ನ್ಯಾಮಗೌಡ್ರ ತಿಳಿಸಿದ್ದಾರೆ.

ಕಡ್ಡಿ ಮೆಣಸಿನಕಾಯಿ ಕ್ವಿಂಟಾಲ್​ಗೆ 1,300 ರಿಂದ 26,999 ರೂ. (ಸರಾಸರಿ 12,209ರೂ.), ಡಬ್ಬಿತಳಿ 2,109 ರಿಂದ 37,611ರೂ.(ಸರಾಸರಿ 15,510ರೂ.), ಗುಂಟೂರು 700 ರಿಂದ 10,969 ರೂ. (ಸರಾಸರಿ 5,469) ವರೆಗೆ ಮಾರಾಟವಾಗಿವೆ. ಒಟ್ಟು 262 ದಲಾಲರ ಅಂಗಡಿಯಲ್ಲಿ 373 ಖರೀದಿದಾರರು ಪಾಲ್ಗೊಂಡಿದ್ದರು ಎಂದು ನ್ಯಾಮಗೌಡ್ರ ತಿಳಿಸಿದ್ದಾರೆ.

ಏಳು ಬಾರಿ ಲಕ್ಷಚೀಲ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಹಿಂದಿನ ವರ್ಷದ ಛಾಪು ಕಳೆದುಕೊಂಡಿಲ್ಲ. ಪ್ರತಿ ವಾರ ಲಕ್ಷಗಟ್ಟಲೇ ಮೆಣಸಿನಕಾಯಿ ಚೀಲಗಳನ್ನು ಖರೀದಿಸುತ್ತಿದೆ. ಉತ್ತರ ಕರ್ನಾಟದಲ್ಲಿ ನೆರೆಹಾವಳಿ, ಅತಿವೃಷ್ಟಿ ಇತ್ಯಾದಿ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿಗೆ ಬೇರೆಲ್ಲ ಬೆಳೆ ನಾಶವಾದರೂ ಮೆಣಸಿನಕಾಯಿ ಬೆಳೆಗೆ ಮಾತ್ರ ಹಿನ್ನಡೆಯಾಗಿಲ್ಲ. 2020,ಡಿ 31ರಂದು 1,01, 733 ಚೀಲಗಳು, 2021,ಜ.4ರಂದು 1,22, 722 ಚೀಲಗಳು, 8ರಂದು 1,11,344 ಚೀಲಗಳು, 21ರಂದು 1,16,446 ಚೀಲ, 25ರಂದು 1,10,960 ಚೀಲ, ಫೆ. 1ರಂದು 1,21, 887 ಚೀಲಗಳು ಮಾರಾಟವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net