1.36 ಕೋಟಿ ರೂ. ಲಾಭ

1.36 crore Rs. profit
ತಿಕೋಟಾ ಪಟ್ಟಣದಲ್ಲಿ ಹಮ್ಮಿಕೊಂಡ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನ ನೂತನ ಶಾಖೆಯನ್ನು ಮಲ್ಲಮ್ಮ ಯಾಳವಾರ ಉದ್ಘಾಟಿಸಿದರು. ಶೋಭಾ ಗಿಡದಮನಿ, ಭಾಗಿರಥಿ ತೇಲಿ ಮತ್ತಿತರರಿದ್ದಾರೆ.
Published on

ವಿಜಯಪುರ: ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ನಮ್ಮ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್​ ಶ್ರಮಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ಮಲ್ಲಮ್ಮ ಯಾಳವಾರ ಹೇಳಿದರು.

ತಿಕೋಟ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡ ಬ್ಯಾಂಕಿನ 8 ನೇ ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾರಂಭದಲ್ಲಿ ಅಲ್ಪ ಬಂಡವಾಳದಲ್ಲಿ ಪ್ರಾರಂಭಿಸಿದ ಸಹಕಾರಿ ಬ್ಯಾಂಕ್​ ಸದ್ಯ 8 ಶಾಖೆಗಳನ್ನು ಹೊಂದಿದ್ದು, ಇನ್ನು 3 ಶಾಖೆ ಪ್ರಾರಂಭಿಸಲು ಆರ್​ಬಿಐ ಅನುಮತಿ ನೀಡಿದ್ದು ತ್ವರಿತವಾಗಿ ಆರಂಭಿಸಲಾಗುವುದು ಎಂದು ಅವರು ವಿವರಿಸಿದರು.

ಬ್ಯಾಂಕ್​ ಸದ್ಯ 11,548 ಸದಸ್ಯರನ್ನು ಹೊಂದಿದ್ದು, 200 ಕೋಟಿ ರೂಗಳ ದುಡಿಯುವ ಬಂಡವಾಳದ ಮೂಲಕ 770 ಕೋಟಿ ರೂಗಳ ವಾರ್ಷಿಕ ವಹಿವಾಟು ಮಾಡುವ ಜತೆಗೆ 1.36 ಕೋಟಿ ರೂಗಳ ಲಾಭ ಪಡೆದಿದೆ ಎಂದು ಮಾಹಿತಿ ನೀಡಿದರು.

ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜುಗೌಡ ಪಾಟೀಲ, ಪಿ.ಕೆ.ಪಿ.ಎಸ್​ ನಿರ್ದೇಶಕಿ ಭಾಗಿರಥಿ ತೇಲಿ, ಬ್ಯಾಂಕಿನ ಉಪಾಧ್ಯೆ ಶೋಭಾ ಗಿಡದಮನಿ, ನಿವೃತ್ತ ಲೆಕ್ಕಪರಿಶೋಧಕ ಶಂಕರ ಕಡಿಬಾಗಿಲ ಹಾಗೂ ಸಿ.ಎ. ಚಂದ್ರಕಾಂತ ಕಪಟಕರ ಆಗಮಿಸಿದ್ದರು. ಸಾಹಿತಿ ಸೋಮಶೇಖರ ಜತ್ತಿ, ಗ್ರಾಹಕರಾದ ಶಶಿಕಾಂತ ಕಪಟಕರ, ಸಿದ್ದಪ್ಪ ಮಾಳಿ, ಗುರುಶಾಂತ ಕೋರಿ ಮತ್ತು ಸುನೀತಾ ಕುರ್ಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಧಾನ ವ್ಯವಸ್ಥಾಪಕಿ ಲಕ್ಷಿ$್ಮ ಬಳಗೊಂಡ ಸ್ವಾಗತಿಸಿದರು. ವ್ಯವಸ್ಥಾಪಕಿ ಮೈತ್ರಾ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವುಕುಮಾರ ಬಾಗೇವಾಡಿ ನಿರೂಪಿಸಿದರು. ರೇಣುಕಾ ದೇಸಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net