

ಚಿಕ್ಕೋಡಿ: ಸರ್ಕಾರದ ನಿರ್ದೇಶನದಂತೆ 1.25 ರೂ. ವಿದ್ಯುತ್ ಬಿಲ್ ತುಂಬಲು ನೇಕಾರರು ಸಿದ್ಧರಿದ್ದಾರೆ. ಆದರೆ, ಕಳೆದೆರಡು ತಿಂಗಳಿನ ವಿದ್ಯುತ್ ಬಿಲ್‌ನಲ್ಲಿಯ ಬಾಕಿ ಬಿಲ್ ಮತ್ತು ದಂಡ ಸೇರಿಸಬಾರದು. ಕೇವಲ 1.25 ರೂ. ಬಿಲ್ ಕಟ್ಟಿಸಿಕೊಳ್ಳಬೇಕೆಂದು ರಾಷ್ಟ್ರೀಯ ನೇಕಾರ ಸೇವಾ ಸಂಘದ ಪದಾಧಿಕಾರಿಗಳು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಸುಪ್ರಭಾ ಬಂಡಗಾರ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಸುಪ್ರಭಾ ಬಂಡಗಾರ ಮಾತನಾಡಿದರು. ರಾಷ್ಟ್ರೀಯ ನೇಕಾರರ ಸೇವಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಅರ್ಜುನ ಕುಂಬಾರ, ಬಬನ ಮಾಳಿ, ರಾಜೇಂದ್ರ ಮಾಳಿ, ಈರಗೊಂಡ ಜಿಗಣ, ದಿಲೀಪ ಚೌಗಲೆ, ಪಾಂಡುರಂಗ ಹವಳ ಇತರರು ಇದ್ದರು.