1.20 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಲು ತಿಳಿಸಿಕೊಡುವುದಾಗಿ ಅಪರಿಚಿತ ಮಹಿಳೆಯೊಬ್ಬರು ನಗರದ ವ್ಯಕ್ತಿಯೊಬ್ಬರಿಂದ 1.20 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಬಾಪೂಜಿ ನಗರದ ಮಾರುತಿ ಬಗಡಗೇರಿ ಎಂಬುವವರು ವಂಚನೆಗೆ ಒಳಗಾಗಿದ್ದಾರೆ. ಊರ್ವಸಿ ಪಾಂಡೆ ಎಂಬುವರು ಮಾರುತಿಗೆ ಪರಿಚಯವಾಗಿದ್ದಾರೆ. ಬಳಿಕ ಆನಂದ ದೇಸಾಯಿ ಎಂಬುವರನ್ನು ಪರಿಚಯಿಸಿದ್ದು, ಅವರು ನನಗೆ ಲಿಂಕ್ ಕಳಹಿಸಿ ಅದರಲ್ಲಿ ನನ್ನ ಬ್ಯಾಂಕ್ ಖಾತೆ ಮಾಹಿತಿ ಪಡೆದು ಹಂತ ಹಂತವಾಗಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಮಾರುತಿ, ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net