ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಚಾಲನೆ ವೇಳೆ ಕೈಚಳಕ ತೋರಿರುವ ಕಳ್ಳರು, ಮಂಡಲ ಅಧ್ಯಕ್ಷನಿಂದ 1.20 ಲಕ್ಷ ರೂ. ಕಳವು ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಾ.1ರಂದು ಮ.ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ವೇಳೆ ದೇಗುಲದ ಮುಂಭಾಗದಲ್ಲಿ ಜನಜಂಗುಳಿ ಇತ್ತು. ಈ ಸಮಯದಲ್ಲಿ ಮಂಡಲಾಧ್ಯಕ್ಷ ವೀರಭದ್ರ ಅವರ ಜೇಬಿನಲ್ಲಿದ್ದ 2 ಸಾವಿರ ರೂ. ಮುಖಬೆಲೆಯ 1.20 ಲಕ್ಷ ರೂ. ಕಳೆದು ಹೋಗಿದೆ. ಈ ಸಂಬಂಧ ಮ.ಬೆಟ್ಟದ ಪೊಲೀಸ್ ಠಾಣೆಯಲ್ಲಿ ವೀರಭದ್ರ ದೂರು ನೀಡಿದ್ದಾರೆ.