1.2 ಕೆಜಿ ಗಾಂಜಾ ವಶ, ಇಬ್ಬರ ಬಂಧನ

CRIME LOGOS
Published on

ಮೈಸೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 1.2 ಕೆ.ಜಿ. ಗಾಂಜಾ ಮತ್ತು 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.


ನಜರ್‌ಬಾದ್ ಪೊಲೀಸ್ ಠಾಣೆ ಸರಹದ್ದಿನ ಜೆಎಸ್‌ಎಸ್ 1ನೇ ಹಂತದ ವಾಟರ್ ಸಪ್ಲೈ ಆಫೀಸ್‌ನ ಹಿಂಭಾಗದ ರಸ್ತೆಯಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಇಲಾಖಾ ವಾಹನ ನೋಡಿ ಇಬ್ಬರು ಗಾಬರಿಯಾಗಿ ಓಡಿ ಹೋಗಲು ಮುಂದಾದರು. ಆ ವೇಳೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾಗ ಗಾಂಜಾ ಪತ್ತೆಯಾಗಿದ್ದು, ಮಾರಾಟ ಮಾಡಲು ತಂದಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net