1.14 ಲಕ್ಷ ಟನ್​ ರಾಗಿ ಖರೀದಿಗೆ ಅನುಮತಿ : 25ರಿಂದ ನೋಂದಣಿ ಆರಂಭ , ರಾಜ್ಯದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ

23 1
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ಮತ್ತಷ್ಟು ರಾಗಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಏ.25ರಿಂದ ನೋಂದಣಿ ಆರಂಭಗೊಳ್ಳಲಿದೆ. ಕೆಎಸ್​ಎ್​ಸಿಗಳ ಮೂಲಕ ರಾಗಿ ಖರೀದಿಗೆ ಮಿತಿ ಹೇರಿದ್ದ ಕಾರಣದಿಂದಾಗಿ ಹಲವು ರೈತರು ಬೆಂಬಲ ಬೆಲೆಯಡಿ ರಾಗಿ ಮಾರಾಟದಿಂದ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಹೆಚ್ಚುವರಿ ರಾಗಿ ಖರೀದಿಗೆ ಮನವಿ ಮಾಡಿತ್ತು. ಇದಕ್ಕೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ ರಾಜ್ಯದಲ್ಲಿ ಒಟ್ಟು 1.14 ಲಕ್ಷ ಟನ್​ ರಾಗಿ ಖರೀದಿಗೆ ಅನುಮತಿ ನೀಡಿದೆ. ಇದರಿಂದಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.

ಉತ್ತಮ ಖರೀದಿ: 2021&22ನೇ ಸಾಲಿನ ಮುಂಗಾರಿನಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪ್ರತಿ ಕ್ವಿಂಟಾಲ್​ಗೆ 3337 ರೂ.ನಂತೆ 2.10 ಲಕ್ಷ ಟನ್​ ರಾಗಿ ಖರೀದಿ ಮಾಡಿತ್ತು. ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಒಟ್ಟು 1.72 ಲಕ್ಷ ಕ್ವಿಂಟಾಲ್​ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲಾಗಿತ್ತು. ಸರ್ಕಾರ ವಿಧಿಸಿದ್ದ ಖರೀದಿ ಗುರಿ ಮುಟ್ಟಿದ ಪರಿಣಾಮವಾಗಿ ಖರೀದಿಯನ್ನು ಮೊಟಕುಗೊಳಿಸಲಾಗಿತ್ತು. ಇದು ರೈತರು ಮತ್ತು ಸಂಟನೆಗಳ ಆಕ್ರೋಶಕ್ಕೆ ಕಾರಣವಾಗಿ, ಈಗ ರಾಜ್ಯ ಸರ್ಕಾರ ಬರೆದಿದ್ದ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಕೇಂದ್ರ ಸರ್ಕಾರ 1.14 ಲಕ್ಷ ಟನ್​ ರಾಗಿ ಖರೀದಿಗೆ ಅನುಮತಿ ನೀಡಿದೆ.

25ರಿಂದ ಆರಂಭ: ಎರಡನೇ ಸುತ್ತಿನಲ್ಲಿ ರಾಗಿ ಖರೀದಿಗೆ ಸರ್ಕಾರ ತೀರ್ಮಾನಿಸಿರುವ ಬೆನ್ನಲ್ಲೇ, ಏ. 25ರಿಂದ ಜಿಲ್ಲೆಯಲ್ಲಿ ಖರೀದಿಗಾಗಿ ನೋಂದಣಿ ಆರಂಭಗೊಳ್ಳಲಿದೆ. ಟಾಸ್ಕ್​ ೋರ್ಸ್​ ಸಭೆ ನಂತರ ನೋಂದಣಿ ಆರಂಭಗೊಳ್ಳಲಿದೆ. ರೈತರಿಂದ ಖರೀದಿಸುವ ರಾಗಿಯನ್ನು ಸಾಮಾಜಿಕ ವಿತರಣಾ ಪದ್ಧತಿ ಅಡಿ ರಾಗಿ ಉಪಯೋಗಿಸುವ ಜಿಲ್ಲೆಗಳಿಗೆ ಪಡಿತರದಾರರಿಗೆ ವಿತರಣೆ ಆಗಲಿದೆ. ಹಿಂದೆ ಖರೀದಿ ಮಾಡಿದ್ದ 3377 ರೂ. ಬೆಂಬಲ ಬೆಲೆ ಅಡಿಯಲ್ಲಿ ಈ ಬಾರಿಯೂ ರಾಗಿ ಖರೀದಿ ಆಗಲಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಆಹಾರ ನಿಗಮದ ಮೂಲಕ ರಾಗಿ ಖರೀದಿ ನಡೆಯಲಿದೆ.

ಕಳೆದ ಜನವರಿಯಲ್ಲಿ ನೋಂದಣಿ ಮಾಡಿಕೊಂಡಿದ್ದ ರೈತರಿಂದ ಈಗಾಗಲೇ ಸರ್ಕಾರ ರಾಗಿ ಖರೀದಿ ಮಾಡಿದ್ದು, ಮಾರಾಟ ಮಾಡದೇ ಬಾಕಿ ಇರುವ ರೈತರಿಂದ ಮಾತ್ರ ಖರೀದಿ ನಡೆಯಲಿದೆ.

ರೈತರಲ್ಲಿ ಸಂತಸ: ಸರ್ಕಾರ ಏಕಾಏಕಿ ರಾಗಿ ಖರೀದಿ ಸ್ಥಗಿತಗೊಳಿಸಿದ ಕಾರಣದಿಂದಾಗಿ ಹಲವಾರು ರೈತರು ರಾಗಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಇನ್ನೂ ಕೆಲವರು ಸೂಕ್ತ ಬೆಲೆ ಬಂದಾಗ ಮಾರಾಟ ಮಾಡಿದರೆ ಸಾಕು ಎಂದು ಕಾಯುತ್ತಾ ಕುಳಿತಿದ್ದಾರೆ. ಇದರ ನಡುವೆಯೇ ಸರ್ಕಾರ ಕೈಗೊಂಡಿರುವ ನಿರ್ಧಾರ ರೈತರ ಸಂತಸಕ್ಕೆ ಕಾರಣವಾಗಿದ್ದು, ಮಿತಿ ಹೇರದೆ ಸಂಪೂರ್ಣ ರಾಗಿ ಖರೀದಿ ಮಾಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ರಾಮನಗರ ಸೇರಿ ಬಯಲುಸೀಮೆಯಲ್ಲಿ ಹೆಚ್ಚಾಗಿ ರಾಗಿ ಬೆಳೆಯಲಾಗುತ್ತಿದ್ದು, ಕೇಂದ್ರ ಸರ್ಕಾರ ಮಾಡಿರುವ ಕ್ರಮ ಸ್ವಾಗತಾರ್ಹ. ಕೇವಲ 1.14 ಲಕ್ಷ ಟನ್​ಗೆ ಖರೀದಿ ಮಿತಿಗೊಳಿಸದೆ ರೈತರ ಬಳಿ ಇರುವ ಸಂಪೂರ್ಣ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿ ಮಾಡಬೇಕು. ಸಿ.ಪುಟ್ಟಸ್ವಾಮಿ, ರೈತ ಸಂದ ಮುಖಂಡರು ಜಿಲ್ಲೆಯಲ್ಲಿ ಏ.25ರಿಂದ ರಾಗಿ ಖರೀದಿಗೆ ನೊಂದಣಿ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಟಾಸ್ಕ್​ೋರ್ಸ್​ ಸಭೆ ನಂತರ ನೋಂದಣಿ ಆರಂಭವಾಗಲಿದೆ. ಮೊದಲ ಹಂತದಲ್ಲಿ ಒಟ್ಟು 1.72 ಲಕ್ಷ ಕ್ವಿಂಟಾಲ್​ ರಾಗಿ ಖರೀದಿ ಮಾಡಲಾಗಿತ್ತು. ಎಚ್​.ಆರ್​.ಜಯಣ್ಣ, ವ್ಯವಸ್ಥಾಪಕ, ಕೆಎಸ್​ಎ್​ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net