ವೀರಶೈವ ಸಹಕಾರ ಸಂಘಕ್ಕೆ 1.14 ಲಕ್ಷ ರೂ. ಲಾಭ

27sor2
ಸೊರಬದಲ್ಲಿ ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಎಚ್.ಪಿ.ಪ್ರೇಮಾ, ಮಲ್ಲಿಕಾರ್ಜುನ ಗುತ್ತೇರ್, ಕೆ.ವಿ.ಗೌಡ, ಕೆ.ಜಿ.ಲೋಲಾಕ್ಷಮ್ಮ, ಸಿ.ಪಿ.ವಿನಾಯಕ್ ಇತರರಿದ್ದರು.
Published on

ಸೊರಬ: ಸಮಾಜದ ಹಿಂದುಳಿದವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಸಂಘವನ್ನು ಹುಟ್ಟುಹಾಕಿದ್ದು ಸದಸ್ಯರ ಸಹಕಾರದಿಂದ ಕಳೆದ ಎಂಟು ವರ್ಷದಿಂದ ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘ ಉತ್ತಮ ಪ್ರಗತಿಯತ್ತ ಸಾಗುತ್ತ್ತಿದೆ ಎಂದು ಸಂಘದ ಅಧ್ಯಕ್ಷೆ ಎಚ್.ಪಿ.ಪ್ರೇಮಾ ಹೇಳಿದರು.
ಭಾನುವಾರ ಪಟ್ಟಣದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಪ್ರಸ್ತುತ 1.41 ಲಕ್ಷ ರೂ. ಲಾಭ ಗಳಿಸಿದೆ. 64.11 ಲಕ್ಷ ರೂ. ಠೇವಣಿ ಸಂಗ್ರಹವಾಗಿದ್ದು 37.91 ಲಕ್ಷ ರೂ. ಠೇವಣಿಯನ್ನು ಸದಸ್ಯರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದೆ. ಮಾರ್ಚ್ ಅಂತ್ಯಕ್ಕೆ 49.23 ಲಕ್ಷ ರೂ. ಠೇವಣಿ ಸಂಗ್ರಹವಾಗಿದೆ. 1.15 ಲಕ್ಷ ರೂ. ಜಾಮೀನು ಸಾಲವನ್ನು ಷೇರುದಾರರಿಗೆ ನೀಡಲಾಗಿದೆ ಎಂದರು.
ಕೆ.ಸಂಗಪ್ಪ ನಾಯ್ಕ ಬೆನ್ನೂರು ಹಾಗೂ ಎಚ್.ಆರ್.ರುದ್ರಪ್ಪ ನಾಯ್ಕ ಅಂಡಗಿ ಅವರ ಸ್ಮರಣಾರ್ಥ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಾದ ಎಂ.ದಶಮಿ ಕಕ್ಕರಸಿ, ಎಂ.ಡಿ.ವಂದಿತಾ ತಲಗುಂದ, ಜೆ.ಡಿ.ದೊರೆ ಪಾಟೀಲ್, ಕೆ.ಆರ್.ಅನುಷಾ ಚಿಕ್ಕಇಡಗೋಡು ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉಪಾಧ್ಯಕ್ಷ ಮಲ್ಲಿಕಾರ್ಜುನ ಗುತ್ತೇರ್, ನಿರ್ದೇಶಕರಾದ ಕೆ.ವಿ.ಗೌಡ, ಎಚ್.ಮಲ್ಲಿಕಾರ್ಜುನಪ್ಪ, ಕೆ.ಬಿ.ಜಯಶೀಲಗೌಡ, ಟಿ.ಎಸ್. ಬಂಗಾರಸ್ವಾಮಿ, ಕೆ.ಜಿ.ಲೋಲಾಕ್ಷಮ, ಲತಾ ಮಹೇಶ್ವರ, ಎಂ.ಜಿ.ನಿರಂಜನ, ಎಂ.ಎನ್ ಸುರೇಂದ್ರ ಗೌಡ ವಿನಯ ಪಾಟೀಲ್, ವೀರಬಸವನ ಗೌಡ, ಕೆ.ಸಿ ಶಿವಕುಮಾರ ಗೌಡ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಿ.ಪಿ ವಿನಾಯಕ್, ಟಿ.ಆರ್.ಬಸವನ ಗೌಡ, ಸಂಪತ್‌ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net