ಸರ್ಕಾರಿ ಶಾಲೆಗೆ 1.11 ಲಕ್ಷ ರೂ. ದೇಣಿಗೆ

11blh6-nayanagar-news.jpg
Published on

ಬೈಲಹೊಂಗಲ: ಸರ್ಕಾರಿ ಶಾಲೆಗಳನ್ನು ಬಲಪಡಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಶಾಲೆಗೆ ಚಿತ್ರಕಲಾ ಶಿಕ್ಷಕಿ ಸುವರ್ಣಾ ಅಂಗಡಿ ದೇಣಿಗೆ ನೀಡಿರುವುದು ಎಲ್ಲರಿಗೂ ಮಾದರಿ ಎಂದು ಬಿಇಒ ಎ.ಎನ್.ಪ್ಯಾಟಿ ಹೇಳಿದರು.

ನಯಾನಗರ ಸರ್ಕಾರಿ ಪ್ರೌಢ ಶಾಲೆಗೆ ಚಿತ್ರಕಲಾ ಶಿಕ್ಷಕಿ ಸುವರ್ಣಾ ಅಂಗಡಿ 1.11 ಲಕ್ಷ ರೂ. ದೇಣಿಗೆ ನೀಡಿದರು. ಎ.ಎನ್. ಪ್ಯಾಟಿ, ನಾಗೇಶ ಮಾಳನ್ನವರ, ಪಿ.ಬಿ. ಮಂತ್ರೋಪಕರ ಇತರರಿದ್ದರು.
ನಯಾನಗರ ಸರ್ಕಾರಿ ಪ್ರೌಢ ಶಾಲೆಗೆ ಚಿತ್ರಕಲಾ ಶಿಕ್ಷಕಿ ಸುವರ್ಣಾ ಅಂಗಡಿ 1.11 ಲಕ್ಷ ರೂ. ದೇಣಿಗೆ ನೀಡಿದರು. ಎ.ಎನ್. ಪ್ಯಾಟಿ, ನಾಗೇಶ ಮಾಳನ್ನವರ, ಪಿ.ಬಿ. ಮಂತ್ರೋಪಕರ ಇತರರಿದ್ದರು.

ನಯಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿ ಸುವರ್ಣಾ ಅಂಗಡಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಚಿತ್ರಕಲೆ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಿದ್ದಲ್ಲದೆ, ಶಾಲೆಯ ಅಭಿವೃದ್ಧಿಗೆ ಒಟ್ಟು 1.11 ಲಕ್ಷ ರೂ. ನೀಡಿದ್ದು ಶ್ಲಾಘನೀಯ ಎಂದರು. ಶಿಕ್ಷಕಿ ಸುವರ್ಣಾ ಅಂಗಡಿ ಮಾತನಾಡಿದರು. ನಿವೃತ್ತ ಶಿಕ್ಷಕಿ ಪಿ.ಬಿ ಮಂತ್ರೋಪಕರ, ವರ್ಗಾವಣೆಗೊಂಡ ಪಿ.ಎಂ. ನಿಕ್ಕಮನವರನ್ನೂ ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ನಾಗೇಶ ಮಾಳನ್ನವರ, ನಿವೃತ್ತ ಪ್ರಾಚಾರ್ಯ ಮಹಾಂತೇಶ ಇಂಗಳಗಿ, ಶ್ರೀಕಾಂತಗೌಡ ಪಾಟೀಲ, ಮಲ್ಲಪ್ಪ ಕಾಂಬಳೆ, ಮಲ್ಲಿಕಾರ್ಜುನ ಪೆಂಟೇದ, ಎಂ.ಎಂ.ಸಂಗೊಳ್ಳಿ, ಕೆ.ಎ. ಮಹಾಜನ, ಎಂ.ಎಂ. ಕರವಿನಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net