

ಚಿಕ್ಕೋಡಿ ಗ್ರಾಮೀಣ: ಗ್ರಾಮಗಳ ರಸ್ತೆ ಸುಧಾರಣೆಗೆ ಒಟ್ಟು 1.10 ಕೋಟಿ ರೂ. ಅನುದಾನ ಮಂಜೂರಾಗಿದ್ದು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮುಖಂಡ ಮಲ್ಲಿಕಾರ್ಜುನ ಪಾಟೀಲ ಹೇಳಿದರು.
ತಾಲೂಕಿನ ಕೆರೂರ ಗ್ರಾಮದ ಕೆಂಪಟ್ಟಿ ರಸ್ತೆಯಿಂದ ಮಾಳಿ, ಗಡದೆ ತೋಟಗಳ ಮಾರ್ಗವಾಗಿ ಕಾಡಾಪುರ ಕೆರೆಯವರೆಗೆ ನಿರ್ಮಾಣವಾಗಲಿರುವ 60 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ಜೋಡಕುರಳಿ ರಸ್ತೆಯಿಂದ ಪಾಟೀಲ ತೋಟದವರೆಗೆ ನಿರ್ಮಾಣವಾಗಲಿರುವ 50 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜೋಡಕುರಳಿ ಗ್ರಾಪಂ ಉಪಾಧ್ಯಕ್ಷ ಮುರಾರಿ ನಾಗನೂರೆ ಮಾತನಾಡಿ, ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿರುವುದು ಸಂತಸದ ವಿಷಯ. ಈ ರಸ್ತೆಯು ಕೆರೂರ, ಜೋಡಕುರಳಿ ಹಾಗೂ ಉಮರಾಣಿ ಗ್ರಾಮದ ರೈತರಿಗೆ ಕೃಷಿ ಉತ್ಪನ್ನಗಳ ಸಾಗಣೆಗೆ ಉಪಯೋಗವಾಗಲಿದೆ ಎಂದರು.
ಪ್ರಕಾಶ ರಾಚನ್ನವರ, ಕೆರೂರ ಗ್ರಾಪಂ ಅಧ್ಯಕ್ಷ ವೀರೇಂದ್ರ ಪಾಟೀಲ, ಉಪಾಧ್ಯಕ್ಷ ಸತ್ತೆಪ್ಪ ಖೋತ, ಮಹೇಶ ಪಾಟೀಲ, ಮಲ್ಲಪ್ಪ ಬಾಗಿ, ರವಿ ಪಾಟೀಲ, ರವಿ ತುಬಾಕೆ, ಯಲ್ಲಪ್ಪ ಸನದಿ, ಖಾನಪ್ಪ ಬಾಡಕರ, ಅಭಿಯಂತ ವಿನೀತ, ಬಿ.ಜಿ.ಪಾಟೀಲ, ಶಿವಾನಂದ ಕರೋಶಿ, ಕಾಕಾಸಾಬ ಚಿಮನೆ ಇತರರಿದ್ದರು.