

ರಾಯಚೂರು ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಐದು ಘಟಕಗಳು ಹಾಗೂ ವೈಟಿಪಿಎಸ್‌ನ ಒಂದು ಘಟಕದಲ್ಲಿ ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಇದರಿಂದ ರಾಜ್ಯದಲ್ಲಿ ಅಘೋಷಿತ ವಿದ್ಯುತ್ ಕಡಿತಕ್ಕೆ ಎಸ್ಕಾಂಗಳು ಮುಂದಾಗಿವೆ. ಬೇಸಿಗೆಯಲ್ಲಿ ರಾಜ್ಯದ ಶೇ.೪೦ ಕ್ಕೂ ಹೆಚ್ಚಿನ ವಿದ್ಯುತ್ ಬೇಡಿಕೆ ನೀಗಿಸುವ ಥರ್ಮಲï ಘಟಕಗಳಿಂದ ಅಗತ್ಯ ವಿದ್ಯುತ್ ದೊರೆಯದಿರುವುದು ಪೂರೈಕೆ ಹಾಗೂ ಬೇಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಆರ್‌ಟಿಪಿಎಸ್‌ನ ೮ ಘಟಕಗಳ ಪೈಕಿ ಕಳೆದ ಒಂದು ವರ್ಷದಿಂದ ನಿರ್ವಹಣೆ ಕೊರತೆಯಿಂದ ನಾಲ್ಕನೇ ಘಟಕ ಬಂದ್ ಮಾಡಲಾಗಿದೆ. ಉಳಿದ ಘಟಕದಲ್ಲಿ ೦೧, ೦೩, ೦೬, ೦೭ ನೇ ಘಟಕ ಮತ್ತು ವೈಟಿಪಿಎಸ್‌ನ ೨ನೇ ಘಟಕದಲ್ಲಿ ಬಾಯ್ಲರ್ ಸುಟ್ಟಿದ್ದು ಹಾಗೂ ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ನಿಲ್ಲಿಸಲಾಗಿದೆ.
ಪ್ರಸ್ತುತವಾಗಿ ಆರ್‌ಟಿಪಿಎಸ್‌ನ ೦೨ ಮತ್ತು ೮ನೇ ಘಟಕದಿಂದ ೫೩೫ ಮೆವಾ ಉತ್ಪಾದನೆಯಾದರೆ ವೈಟಿಪಿಎಸ್‌ನ ಒಂದನೇ ಘಟಕದಿಂದ ೫೪೯ ಮೆವಾ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ.