

ಮೈಸೂರು : ಕರ್ನಾಟಕದ ನಂ.1 ಮಾರುತಿ ಸುಜಿಕಿ ಡೀಲರ್ ಕಲ್ಯಾಣಿ ಮೋಟಾರ್ಸ್ ಈಗ ಮೈಸೂರಿನ ಲಕ್ಷ್ಮೀಪುರಂ, ನಂಜನಗೂಡು, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಮಡಿಕೇರಿ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಶಾಖೆ ತೆರೆದಿದೆ.
ಕಾರುಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು, ಎಕ್ಸ್‌ಚೇಂಜ್ ಮೇಳದಲ್ಲಿ ಹಳೆಯ ಕಾರುಗಳನ್ನು ಕೊಟ್ಟು, ಹೊಸ ಕಾರನ್ನು ಖರೀದಿಸಿ ಮನೆಗೆ ಕೊಂಡ್ಯೊಯ್ಯಬಹುದಾಗಿದೆ. ಬೇಸಿಕ್ ನಿಂದ ಹಿಡಿದು ಟಾಪ್ ಎಂಡ್ ವರೆಗೆ ಉತ್ಕೃಷ್ಟವಾದ ಎಲ್ಲ ಮಾದರಿಯ ಕಾರುಗಳು ಶೋ ರೂಂನಲ್ಲಿ ರೆಡಿ ಇದ್ದು, ಹೋದ ದಿನವೇ ನಮಗೆ ಇಷ್ಟವಾಗುವ ಕಾರನ್ನು ಖರೀದಿಸಬಹುದಾಗಿದೆ.
ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ‘0’ ಡೌನ್ ಪೇಮೆಂಟ್ ಮುಖಾಂತರ ಬ್ಯಾಂಕ್, ಫೈನಾನ್ಸ್‌ನಿಂದ ಲೋನ್ ಪಡೆಯಬಹುದಾಗಿದೆ. ಪ್ರತಿ ದಿನಕ್ಕೆ 278 ರೂ. ಗಳ ಕಡಿಮೆ ವೆಚ್ಚದಲ್ಲಿ ಇಎಂಐ ಪಾವತಿಸಬಹುದಾಗಿದೆ. 5 ಲಕ್ಷದಿಂದ 17 ಲಕ್ಷ ರೂ. ವರಗೆ ವಿವಿಧ ಮಾದರಿಯ ಕಾರುಗಳು ಲಭ್ಯವಿದೆ. 3 ರಿಂದ 5 ಸಾವಿರ ರೂ. ವರೆಗೆ ಲಕ್ಕಿ ಗೋಲ್ಡ್ ಕಾಯಿನ್‌ಗಳು, ಸ್ಥಳದಲ್ಲಿಯೇ ಬುಕ್ ಮಾಡಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.
ಗ್ರಾಹಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ 24*7 ಕಸ್ಟಮರ್ ಸರ್ವಿಸ್ ನೀಡಲಾಗುತ್ತಿದೆ. ಗ್ರಾಹಕರಿಂದ ಉತ್ತಮ ಬೇಡಕೆ ಬರುತ್ತಿದ್ದು, ಮೈಸೂರು ನಗರ ಹಾಗೂ ಹೊರ ಜಿಲ್ಲೆಯಲ್ಲಿ ಶಾಖೆ ತೆರೆಯುವ ಚಿಂತನೆ ಹೊಂದಲಾಗಿದೆ.