ವೀಸಾ ನೀಡುವುದಾಗಿ ವಂಚಿಸಿದ ಆರೋಪಿ ಸೆರೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾಸರಗೋಡು: ನೆದರ್‌ಲೆಂಡ್‌ಗೆ ವೀಸಾ ನೀಡುವ ಭರವಸೆಯೊಂದಿಗೆ 7 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನೀಲೇಶ್ವರ ಚಿರಪ್ಪುಂ ನಿವಾಸಿ ಉಲ್ಲಾಸ್(40) ಎಂಬಾತನನ್ನು ಚಿತ್ತಾರಿಕ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಂಚನೆಗೈದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಆತ ಊರಿಗೆ ವಾಪಸಾಗುತ್ತಿದ್ದಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ. ವೆಸ್ಟ್‌ಎಳೇರಿ ಮಂಗತ್ ನಿವಾಸಿ ಸಜೀವನ್ ಎಂಬುವರ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ. ನೆದರ್‌ಲೆಂಡ್‌ನಲ್ಲಿ ಉದ್ಯೋಗಕ್ಕಾಗಿ ವೀಸಾ ದೊರಕಿಸಿಕೊಡುವುದಾಗಿ 2023 ಸೆ.23 ಹಾಗೂ 2025 ಸೆ.10ರ ಮಧ್ಯೆ ಸಜೀವನ್ ಅವರಿಂದ 7 ಲಕ್ಷ ರೂ. ಪಡೆದು ವೀಸಾ ನೀಡದೆ, ಹಣವನ್ನೂ ವಾಪಸ್ ಮಾಡದೆ ವಂಚಿಸಿರುವ ಬಗ್ಗೆ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಲವರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಆತನ ವಿರುದ್ಧ ಇನ್ನೂ ಹಲವು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net