ಬೆಳ್ತಂಗಡಿ: ವಿದ್ಯಾರ್ಥಿಯು ಕಲಿಕಾ ವೇಳೆಯಲ್ಲಿ ಪುಸ್ತಕ ಮತ್ತು ಬೋರ್ಡ್‌ನೆಡೆಗೆ ಗಮನ ಕೇಂದ್ರೀಕರಿಸಿ ಅಧ್ಯಯನ ಮಾಡಿದರೆ ಯಶಸ್ಸು ನಿಶ್ಚಿತ ಎಂದು ಪುತ್ತೂರು ಕೊಂಬೆಟ್ಟು ಪ.ಪೂ. ಕಾಲೇಜು ಉಪನ್ಯಾಸಕ ಅಬ್ದುಲ್ ರರಝಾಕ್ ಅನಂತಾಡಿ ಹೇಳಿದರು.
ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಮಾಹಿತಿ ಸಂಪನ್ಮೂಲ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.