ಪ್ರವಾಸೋದ್ಯಮ ಅಭಿವೃದ್ಧಿಗೆ ಸೇತುವೆ ಸಹಕಾರಿ : ಲೋಕೋಪಯೋಗಿ ಖಾತೆ ಸಚಿವ ಪಿ.ಎ.ಮಹಮ್ಮದ್ ರಿಯಾಸ್ ಅಭಿಪ್ರಾಯ

ತ್ರಿಕ್ಕರಿಪುರ ಪಂಚಾಯಿತಿ ಮುಂಡೆಮ್ಮಾಡ್ ಸೇತುವೆಯನ್ನು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ಉದ್ಘಾಟಿಸಿದರು.
ತ್ರಿಕ್ಕರಿಪುರ ಪಂಚಾಯಿತಿ ಮುಂಡೆಮ್ಮಾಡ್ ಸೇತುವೆಯನ್ನು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ಉದ್ಘಾಟಿಸಿದರು.
Published on
ಕಾಸರಗೋಡು: ತ್ರಿಕ್ಕರಿಪುರ ಪಂಚಾಯಿತಿ ಮುಂಡೆಮ್ಮಾಡ್ ಸೇತುವೆ ಇಲ್ಲಿನ ದ್ವೀಪ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುವುದರ ಜತೆಗೆ ಸ್ಥಳೀಯರ ಜೀವನಮಟ್ಟ ಸುಧಾರಿಸಲಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ಹೇಳಿದರು.
11 ಮೀಟರ್ ಅಗಲದ ಮುಂಡೆಮ್ಮಾಡ್ ಸೇತುವೆಯು ಪಾದಚಾರಿ ಮಾರ್ಗ ಹೊಂದಿದ್ದು, ಸಾರಿಗೆ ಸೌಲಭ್ಯ ಒದಗಿಸಲಿದೆ. ಪ್ರವಾಸೋದ್ಯಮ ಸಾಮರ್ಥ್ಯ ಹೆಚ್ಚಿಸುವಲ್ಲೂ ಸೇತುವೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಎಡರಂಗ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net