ಕನ್ನಡ ಸಾಹಿತ್ಯ ಭವನ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

District President Hasimpira Valikara, Talikote, Kannada Sahitya Bhavan,
ತಾಳಿಕೋಟೆ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಭೂಮಿಪೂಜೆ ನೆರವೇರಿಸಿದರು. ರೇವಣಸಿದ್ದಪ್ಪ ಕೊಪ್ಪದ, ರಾಜು ಹಂಚಾಟೆ, ಡಾ.ಎ.ಎ.ನಾಲಬಂದ ಇತರರಿದ್ದರು.
Published on

ತಾಳಿಕೋಟೆ: ಕನ್ನಡ ಮನಸ್ಸುಗಳು ಒಟ್ಟಿಗೆ ಕೂಡಿಕೊಂಡು ಪುರಸಭೆಯಿಂದ ನಿವೇಶನ ಖರೀದಿಸುವ ಜತೆಗೆ ಜಿಲ್ಲೆಯಲ್ಲಿಯೇ ಮಾದರಿ ಕನ್ನಡ ಭವನ ಕಟ್ಟಡ ಕಟ್ಟಲು ಮುಂದಾಗಿರುವುದು ಸಂತಸ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಪಟ್ಟಣದ ದೇವರಹಿಪ್ಪರಗಿ ರಸ್ತೆಯ ಕನ್ನಡ ಸಾಹಿತ್ಯ ಬಡಾವಣೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಭವನ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹನ್ನೊಂದು ಸಾವಿರ ಚದರ ಅಡಿಯ ಈ ನಿವೇಶನದಲ್ಲಿ ಶೀಘ್ರ ಕಟ್ಟಡ ನಿರ್ಮಾಣ ಕಾರ್ಯವನ್ನು ಎಲ್ಲ ಶ್ರೀಗಳು ಹಾಗೂ ಸಂತರ ಸಾನ್ನಿಧ್ಯದಲ್ಲಿ ಜನಪ್ರತಿನಿಧಿಗಳು, ದಾನಿಗಳು ಹಾಗೂ ಕನ್ನಡದ ಅಭಿಮಾನಿಗಳಿಂದ ದೇಣಿಗೆ ಸಂಗ್ರಹಿಸಿ ಪ್ರಾರಂಭಿಸಲಾಗುವುದು. ತಾಳಿಕೋಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಅವರು ಕಟ್ಟಡ ನಿರ್ಮಾಣಕ್ಕೆ ಅತ್ಯಂತ ಉತ್ಸುಕರಾಗಿದ್ದಾರೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ತಾಗಿ ಆಗುವಂತೆ ಮಾಡಲಾಗುವುದು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಮಾತನಾಡಿ, ತಾಳಿಕೋಟೆ ಪುರಸಭೆಯಿಂದ ನಿವೇಶನ ಖರೀದಿಸಿ ನೂತನ ಕನ್ನಡ ಭವನ ನಿರ್ಮಾಣ ಮಾಡಲಾಗುತ್ತಿದೆ. ಮಾದರಿಯಾಗಿ ಈ ಭವನ ನಿರ್ಮಾಣದಿಂದ ಸಾಹಿತ್ಯಾಸಕ್ತರಿಗೆ ಎಲ್ಲ ರೀತಿಯ ಕನ್ನಡ ಸವಿರುಚಿ ಒಂದೆಡೆ ಸವಿಯಲು ಅನುಕೂಲವಾಗಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜು ಹಂಚಾಟೆ, ಡಾ.ಎ.ಎ.ನಾಲಬಂದ, ಬಸವರಾಜ ಮದರಕಲ್, ಡಾ.ನಜೀರ ಕೊಲ್ಯಾಳ, ಶಿವಾನಂದ ಹೂಗಾರ, ಜಿ.ಟಿ.ಘೋರ್ಪಡೆ, ರಾಜೇಸಾ ಶಿವನಗುತ್ತಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net