

ಕಾಸರಗೋಡು: ವಿಶ್ವ ತಂಬಾಕು ರಹಿತ ದಿನಾಚರಣೆ ಜಿಲ್ಲಾಮಟ್ಟದ ಉದ್ಘಾಟನೆ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ. ರಾಮದಾಸ್ ನಡೆಸಿದರು.
ವೆಳ್ಳರಿಕುಂಡ್ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿನಿಲ್ ವಿ.ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಉಪಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಸಯನಾ ಎಸ್., ವೆಳ್ಳರಿಕುಂಡ್, ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ಡಾ.ಕೆರ್ಲಿನ್ ಪಿ.ಜೆರೋಮ್, ಡಾ.ಟಿಜೋ ಪಿ.ಜಾಯ್, ಸಾರ್ವಜನಿಕ ಆರೋಗ್ಯ ಶುಶ್ರೂಷಕಿ ಎಲಿಯಮ್ಮ ವರ್ಗೀಸ್, ಆರೋಗ್ಯ ನಿರೀಕ್ಷಕ ಸಾಜು ಸೆಬಾಸ್ಟಿಯನ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜೂನಿಯರ್ ಕನ್ಸಲ್ಟೆಂಟ್ ಕಮಲ್ ಕೆ.ಜೋಸ್ ಉಪಸ್ಥಿತರಿದ್ದರು.
ಸೇಂಟ್ ಜೂಡ್ ಸ್ಕೂಲ್ ಎನ್ಸಿಸಿ, ಎಸ್.ಪಿ.ಸಿ.ವಿದ್ಯಾರ್ಥಿಗಳು, ಕುಟುಂಬಶ್ರೀ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಆಯೋಜಿಸಿದ್ದ ಜಾಗೃತಿ ವಿಚಾರ ಸಂಕಿರಣದಲ್ಲಿ ವೆಳ್ಳರಿಕುಂಡ್ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿನ್ ತರಗತಿ ನಡೆಸಿದರು.
ವೆಳ್ಳರಿಕುಂಡ್ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆರಂಭಿಸಲಾದ ತಂಬಾಕು ನಿವಾರಣಾ ಕ್ಲಿನಿಕನ್ನು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ರಾಮದಾಸ್ ಎ.ವಿ.ಉದ್ಘಾಟಿಸಿದರು.