

ಕೊಪ್ಪಳ: ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಗವಿಮಠದ ಅಭಿನವ ಗವಿಶ್ರೀಗಳಿಗೆ ಶನಿವಾರ ಆಹ್ವಾನ ನೀಡಲಾಯಿತು.
ಅಯೋಧ್ಯೆ ರಾಮ ಮಂದಿರ ಇದೆ ಜ.22ರಂದು ಉದ್ಘಾನೆಗೊಳ್ಳಲಿದೆ. ದೇಶಾದ್ಯಂತ ಹಲವು ಮಠಾಧೀಶರು, ಗಣ್ಯರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ.
ವಿಶ್ವ ಹಿಂದು ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಇಂದು ಬೆಳಗ್ಗೆ ಗವಿಮಠದಲ್ಲಿ ಅಭಿನವ ಗವಿಶ್ರೀಗಳಿಗೆ ಅಧಿಕೃತ ಆಹ್ವಾನ ನೀಡಲಾಯಿತು.
ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ವಿತರಿಸಿ ಭವ್ಯ ಕ್ಷಣಕ್ಕೆ ಸಾಕ್ಷಿಯಾಗುವಂತೆ ಮನವಿ ಮಾಡಲಾಯಿತು.
ಸಂಘ ಪರಿವಾರದ ಉತ್ತರ ಪ್ರಾಂತ ಸಂಘ ಚಾಲಕ ಬಸವರಾಜ ಡಂಬಳ, ಬಿಜೆಪಿ ಬಳ್ಳಾರಿ ವಿಭಾಗ ಸಹ ಪ್ರಭಾರಿ ಚಂದ್ರು ಪಾಟೀಲ್ ಹಲಗೇರಿ, ಸುನಿಲ್ ಹೆಸರೂರು, ಅಪ್ಪಣ್ಣ ಪದಕಿ, ವಕ್ತಾರ ಮಹೇಶ ಅಂಗಡಿ ಇತರರಿದ್ದರು.