

ಕೊಪ್ಪಳ: ತಾಲೂಕಿನ ಗಿಣಿಗೇರಿ ಭಾಗದಲ್ಲಿ ಅನೇಕ ಕಾರ್ಖಾನೆಗಳು ನಿಯಮ ಉಲ್ಲಂಘಿಸಿ ಜನವಸತಿ ಪ್ರದೇಶಗಳಲ್ಲಿ ಸ್ಥಾಪನೆಯಾಗಿವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ವಿವಿಧ ಗ್ರಾಮಗಳಲ್ಲಿ ಬುಧವಾರ ಜನಜಾಗೃತಿ ನಡೆಸಿ ಮಾತನಾಡಿದರು.
ಕಾರ್ಖಾನೆಗಳು ಜನವಸತಿ ಪ್ರದೇಶದಿಂದ ಇಂತಿಷ್ಟು ದೂರ ಇರಬೇಕೆಂಬ ನಿಯಮವಿದೆ. ಆದರೆ, ಅವುಗಳನ್ನು ಕೊಪ್ಪಳದಲ್ಲಿ ಉಲ್ಲಂನೆ ಮಾಡಲಾಗಿದೆ. ಚುನಾಯಿತ ಪ್ರತಿನಿಧಿಗಳು ತಮ್ಮ ಲಾಭಕ್ಕೆ ಅನುಮತಿ ನೀಡಿದ್ದಾರೆ. ಇದರಿಂದ ಸುಮಾರು 30ಕ್ಕೂ ಹೆಚ್ಚು ಗ್ರಾಮಸ್ಥರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉದ್ಯೋಗ ಸೃಷ್ಟಿ ಆಸೆ ಹುಟ್ಟಿಸಿ ಅನ್ಯ ರಾಜ್ಯದವರಿಗೆ ಕೆಲಸ ಕೊಡುತ್ತಿವೆ. ಸ್ಥಳಿಯರಿಗೆ ಕಠಿಣ ಕೆಲಸ ನೀಡುತ್ತವೆ ಎಂದರು.
ಟಿಯುಸಿಐ ಸಂಚಾಲಕ ಕೆ.ಬಿ.ಗೋನಾಳ ಮಾತನಾಡಿ, ಬಲ್ಡೋಟಾ ಕಂಪನಿ 54 ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಹೊಸ ಕಾರ್ಖಾನೆ ಆರಂಭಿಸುತ್ತಿದೆ. ಸರ್ಕಾರ ಅನುಮತಿಸಿದ್ದು ಖಂಡನೀಯ. ಈಗಿರುವ ಟಕವನ್ನು ಸಂಪೂರ್ಣ ಮುಚ್ಚಿದರೆ ಮಾತ್ರ ನಗರದ ಜನ ಉತ್ತಮವಾಗಿ ಜೀವನ ನಡೆಸಬಹುದು. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯದ ಜೀವನ ನಾಡಿಯಾದ ತುಂಗಭದ್ರಾ ಜಲಾಶಯದ ನೀರು ಅರ್ಧದಷ್ಟು ನೀರು ಕಾರ್ಖಾನೆಗಳಿಗೆ ಖಾಲಿಯಾಗಲಿದೆ. ಇದಕ್ಕೆ ಅವಕಾಶ ನೀಡಬಾರದೆಂದು ಕರೆ ನೀಡಿದರು.
ಹೋರಾಟಗಾರರಾದ ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ಶರಣು ಗಡ್ಡಿ, ಬಸವರಾಜ ನರೇಗಲ್, ಮುದಕಪ್ಪ ಹೊಸಮನಿ, ರಾು ಚಾಕರಿ, ಸುಂಕೇಶ, ದುರುಗೇಶ ಬರಗೂರ, ಯಮನೂರ, ಮಾರುತಿ, ಯಮುನಾ ಇತರರಿದ್ದರು.