ಕೊಪ್ಪಳದಲ್ಲಿ ಜಗಜೀವನರಾಮ್​ ಜಯಂತಿ ಆಚರಣೆ

district koppal babu jagajeevanram jayanthi celebration
Published on

ಕೊಪ್ಪಳ: ದೇಶದ ಉಪ ಪ್ರಧಾನಿ, ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಮಾಡಿದವರು ಡಾ.ಬಾಬು ಜಗಜೀವನರಾಮ್​ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್​ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೆಹರು ಸಂಪುಟದಲ್ಲಿ ಜಗಜೀವನರಾಮ್​ ಕೆಲಸ ಮಾಡಿದ್ದಾರೆ. ಸಂವಿಧಾನ ಸಮಿತಿ ಸದಸ್ಯರೂ ಆಗಿದ್ದರು. ಇಂಡೋ ಪಾಕ್​ ಯುದ್ಧ ವೇಳೆ ರಕ್ಷಣಾ ಸಚಿವರಾಗಿ ನಿಭಾಯಿಸಿದ್ದರು. ಕೃಷಿ ಸಚಿವರಾಗಿ ಹೊಸ ಯೋಜನೆ ಪರಿಚಯಿಸಿದರು. 1974ರ ಬರಗಾಲ ಸಮಯದಲ್ಲಿ ಆಹಾರ ಸಚಿವರಾಗಿ ಬಿಕ್ಕಟ್ಟು ನಿಭಾಯಿಸಿದರು. ಅಸ್ಪ-----ೃಶ್ಯತೆ ಆಚರಣೆ, ಅಸಮಾನತೆ ಹೋಗಲಾಡಿಸಲು ಹಲವು ಹೋರಾಟ ಮಾಡಿದರು. ಮಹನಿಯರ ಜಯಂತಿ ಕೇವಲ ಒಂದು ವರ್ಗಕ್ಕೆ ಸೀಮಿತವಾಗಬಾರದು. ಅವರು ಎಲ್ಲರಿಗೂ ಸೇರಿದ ವ್ಯಕ್ತಿಗಳು. ಎಲ್ಲರೂ ಸೇರಿ ಅವರ ಆದರ್ಶ ಅರಿಯಲೆಂದೇ ಸರ್ಕಾರ ಜಯಂತಿ ಆಚರಿಸುತ್ತದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಜಗಜೀವನರಾಮ್​ 8 ಖಾತೆಗಳನ್ನು ನಿಭಾಯಿಸಿದ್ದಾರೆ. ಕೃಷಿಯಲ್ಲಿ ಮಹತ್ತರ ಬದಲಾವಣೆ ತಂದು ಹಸಿರು ಕ್ರಾಂತಿ ಮಾಡಿದರು. ಭಾರತವನ್ನು ಸ್ವಾಭಿಮಾನಿ ದೇಶವನ್ನಾಗಿಸಿದರು. ಇವರು ಅಸ್ಪ-----ೃಶ್ಯತೆ ವಿರುದ್ಧ ಮಾಡಿದ ಹೋರಾಟ ಗಾಂಧೀಜಿ ಅವರ ಗಮನ ಸೆಳೆದಿತ್ತು. ಜಗಜೀವನರಾಮ್​ ಬೆಂಕಿಯಲ್ಲಿ ಹದಗೊಳಿಸಿದ ಚಿನ್ನ ಎಂದು ಬಾಪು ಬಣ್ಣಿಸಿದ್ದರು ಎಂದು ತಿಳಿಸಿದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ವಿದ್ಯಾರ್ಥಿದೆಸೆಯಲ್ಲಿಯೇ ಅಸ್ಪ-----ೃಶ್ಯತೆ ವಿರುದ್ಧ ಬಾಬು ಜಗಜೀವನರಾಮ್​ ಹೋರಾಡಿದ್ದಾರೆ. ಸಂಟನೆ ಮಾಡಿ ಸಮಾನತೆಗಾಗಿ ಶ್ರಮಿಸಿದರು. ದಲಿತರಿಗೆ ಮೀಸಲಾತಿ ಕೊಡಿಸಲು ಹೋರಾಡಿದರು. ಇಂದು ಸರಿಯಾಗಿ ಮೀಸಲು ಹಂಚಿಕೆ ಮಾಡಬೇಕಿದೆ. ನಮ್ಮ ಸಂವಿಧಾನ ಬದ್ಧ ಪಾಲು ನೀಡಬೇಕು ಎಂದು ಒತ್ತಾಯಿಸಿದರು.

ಗಂಗಾವತಿ ವೈದ್ಯಾಧಿಕಾರಿ ಡಾ.ರಾಜಶೇಖರ ನಾರಿನಾಳ ಉಪನ್ಯಾಸ ನೀಡಿದರು. ನಗರದ ತಹಸೀಲ್ದಾರ್​ ಕಚೇರಿಯಿಂದ ಸಾಹಿತ್ಯ ಭವನವರೆಗೆ ಬಾಬು ಜಗಜಊವನರಾಮ್​ ಭಾವಚಿತ್ರ ಮೆರವಣಿಗೆ ನಡೆಯಿತು.

ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಜಿಲ್ಲಾಧಿಕಾರಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ವಿರೂಪಾಕ್ಷಪ್ಪ ಮೋರನಾಳ, ಸಮುದಾಯ ಮುಖಂಡರಾದ ಗಾಳೆಪ್ಪ ಪೂಜಾರ, ಚನ್ನಬಸಪ್ಪ ಹೊಳೆಯಪ್ಪ, ರಾಮಣ್ಣ ಕಂದಾರಿ, ಗ್ಯಾನಪ್ಪ ಪೂಜಾರಿ, ಲಿಂಗರಾಜ, ಪರಶುರಾಮ ಕೆರಳ್ಳಿ, ಯಲ್ಲಪ್ಪ ಮುದ್ಲಾಪುರ, ನಿಂಗಜ್ಜ ಹರ್ಲಾಪುರ, ಗಣೇಶ ಹೊರತಟ್ನಾಳ, ಮಂಜುನಾಥ ಗೊಂಡಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net