ಕಾಸರಗೋಡು ಸೀರೆ ಉತ್ತೇಜನಕ್ಕೆ ಜಿಲ್ಲಾಡಳಿತ ಸಹಾಯ : ಮಾಲೀಕತ್ವದ ಕಾರ್ಡ್ ಬಿಡುಗಡೆ

saree
ಕಾಸರಗೋಡು ಸೀರೆಗಳ ಖರೀದಿದಾರರಿಗೆ ನೀಡಲಾಗುವ ಮಾಲೀಕತ್ವದ ಕಾರ್ಡನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಬಿಡುಗಡೆಗೊಳಿಸಿದರು.
Published on

ಕಾಸರಗೋಡು : ಕೈಮಗ್ಗದ ಬಟ್ಟೆಗಳಿಗೆ ಉತ್ತೇಜನ ನೀಡುವ ಜಿಲ್ಲಾಡಳಿತದ ಸುಧಾರಣಾ ಕ್ರಮಗಳ ಅಂಗವಾಗಿ ಕಾಸರಗೋಡು ಸೀರೆ ಖರೀದಿದಾರರಿಗೆ ನೀಡಿರುವ ಮಾಲೀಕತ್ವ ಚೀಟಿಯನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿಗಳ ಚೇಂಬರ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಕಾಸರಗೋಡು ಸೀರೆಗಳ ವಿಶೇಷ ಅಧಿಕಾರಿ ಆದಿಲ್ ಮುಹಮ್ಮದ್, ಕಾಸರಗೋಡು ನೇಕಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಮಾಧವ ಹೇರಳ, ಕಾರ್ಯದರ್ಶಿ ಬಿ.ಎನ್.ಅನಿತಾ, ನಿರ್ದೇಶಕರಾದ ದಾಮೋದರ, ರಾಮಚಂದ್ರ, ಗಂಗಮ್ಮ, ಲಿಜಾತೋಮಸ್, ಮಮತಾ ಮೊದಲಾದವರು ಉಪಸ್ಥಿತರಿದ್ದರು.

ಜಾಗತಿಕ ಸೂಚ್ಯಂಕ ಪ್ರಮಾಣಪತ್ರ ಲಭಿಸಿರುವ ಭಾರತೀಯ ಕೈಮಗ್ಗ ಬ್ರಾಂಡ್ ಆಗಿರುವ ಕಾಸರಗೋಡಿನ ಸ್ವಂತ ಉತ್ಪನ್ನ ’ಕಾಸರಗೋಡು ಸೀರೆಗಳ’ಮಾರುಕಟ್ಟೆ ವಿಸ್ತರಿಸಲು ಹಾಗೂ ಜಿಲ್ಲೆಗೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಜಿಲ್ಲಾಡಳಿತ ಸಿದ್ಧಗೊಳಿಸಿರುವ ವಿನೂತನ ಯೋಜನೆಯ ಭಾಗ ಇದಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net