

ಕಾಸರಗೋಡು: ಶಾಲಾ ತರಗತಿ ಪುನರಾರಂಭಗೊಳ್ಳಲು ಕೆಲ ದಿನಗಳು ಮಾತ್ರ ಬಾಕಿಯಿದ್ದು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಶಿಕ್ಷಕರ ಕೈಪಿಡಿ ತುರ್ತಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಪಿಎಸ್‌ಟಿಎ) ರಾಜ್ಯಾಧ್ಯಕ್ಷ ಕೆ.ಅಬ್ದುಲ್ ಮಜೀದ್ ತಿಳಿಸಿದ್ದಾರೆ.
ಕಾಸರಗೋಡಲ್ಲಿ ಕಾಸರಗೋಡು ಕಂದಾಯ ಜಿಲ್ಲಾಮಟ್ಟದ ಎರಡು ದಿನಗಳ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಘಟನೆ ಕಂದಾಯ ಜಿಲ್ಲಾಧ್ಯಕ್ಷ ಪಿ.ಟಿ.ಬೆನ್ನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕೆ.ಹರಿಲಾಲ್, ಪಿ.ಶಶಿಧರನ್, ಪ್ರಶಾಂತ್ ಕಾನತ್ತೂರು, ಅಲೋಶಿಯಸ್ ಜಾರ್ಜ್, ಸ್ವಪ್ನಾ ಜಾರ್ಜ್, ಎಂ.ಕೆ.ಪ್ರಿಯಾ ಮೊದಲಾದವರು ಉಪಸ್ಥಿತರಿದ್ದರು.
ಕಂದಾಯ ಜಿಲ್ಲಾ ಕಾರ್ಯದರ್ಶಿ ಕೆ.ಗೋಪಾಲ ಕೃಷ್ಣನ್ ಸ್ವಾಗತಿಸಿದರು. ಕಂದಾಯ ಜಿಲ್ಲಾ ಕೋಶಾಧಿಕಾರಿ ಪಿ.ಶ್ರೀಜಾ ವಂದಿಸಿದರು. ಪಠ್ಯಪುಸ್ತಕ ಸುಧಾರಣೆ ವಿಷಯ ಕುರಿತು ಕೆ.ಪಿ.ಎಸ್.ಟಿ.ಎ. ರಾಜ್ಯ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ಕೆ.ಅನಿಲ್ ಕುಮಾರ್, ಕೇರಳದಲ್ಲಿ ಸಾಮಾನ್ಯ ಶಿಕ್ಷಣದ ಪುನರ್ ವಿಮರ್ಶೆ ವಿಷಯದ ಕುರಿತು ಸೇಂಟ್ ಅಲೋಶಿಯಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಪಿ.ಪಿ.ಸಜಿಮೋನ್ ತರಗತಿ ನಡೆಸಿದರು.