ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

Bel_Students
Published on

ಬೆಳ್ತಂಗಡಿ: ಮುಗುಳಿ ನೇತಾಜಿ ಸುಭಾಷ್ ಚಂದ್ರಬೋಸ್ ವಸತಿ ಸಹಿತ ವಿದ್ಯಾಲಯದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮ ಧ್ವಜಾರೋಹಣ ನೆರವೇರಿಸಿದರು.

ಉದ್ಯಮಿ ಬಸವರಾಜ್ ಮತ್ತು ಉದ್ಯಮಿ ಮೋಹನ್ ಚೌದರಿ ಅವರನ್ನು ಸನ್ಮಾನಿಸಲಾಯಿತು. 100 ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ಸಿಲ್, ಸ್ಕೇಚ್ ಪೇನ್, ರಬ್ಬರ್, ಪೇನ್ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ ವಿತರಿಸಲಾಯಿತು.

ತಾಪಂ ಮ್ಯಾನೇಜರ್ ಪ್ರಶಾಂತ್, ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ಸಂದೇಶ್, ನಿವೃತ್ತ ಸೈನಿಕ ಕುಲದೀಪ್ ಸಿಂಗ್, ಮುಖ್ಯಶಿಕ್ಷಕ ವಿಠಲ್ ಬಿ., ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ತಾಪಂ ಇಒ ಭವಾನಿ ಶಂಕರ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಚೈತ್ರೇಶ್ ಇಳಂತಿಲ, ವಿಷ್ಣು ಸೇವಾ ಸಮಾಜ ಮೋಹನ್ ಚೌದರಿ, ಉಜಿರೆ ಸಂಧ್ಯಾ ಫ್ರೇಶ್ ಆಡಳಿತಾಧಿಕಾರಿ ಅರ್ಚನಾ ಪೈ ಬದುಕು ಕಟ್ಟೋಣ ಬನ್ನಿ ತಂಡ ಸಂಚಾಲಕರಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಹಾಗೂ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸದಸ್ಯರು ಹಾಗೂ ಉಜಿರೆ ಸಂಧ್ಯಾ ಫ್ರೇಶ್ ಸಿಬ್ಬಂದಿ, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net