

ಹೆಬ್ರಿ: ಮಕ್ಕಳ ಮನಸ್ಸು ಪಾಠಕ್ಕಿಂತ ಆಟದ ಕಡೆಗೆ ಹೆಚ್ಚು ಹಾತೊರೆಯುವಂತದ್ದು. ಆಟದ ನಂತರ ಪಾಠ ಇದ್ದಾಗ ಅವರ ಮೈ ಮನಸ್ಸು ಪ್ರಫುಲಗೊಳ್ಳುತ್ತದೆ. ಕಲಿಕೆ ಸುಗಮವಾಗುತ್ತದೆ. ಜ್ಞಾನಕ್ಕಿಂತಲೂ ಮಿಗಿಲಾದದ್ದು ಯಾವುದು ಇಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಈಗಲೇ ಹೊಂದಿರಬೇಕು ಎಂದು ಕಾಪು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ, ಹಳೇ ವಿದ್ಯಾರ್ಥಿ ಸುನೀಲ್‌ಕುಮಾರ್ ಶೆಟ್ಟಿ ಹೇಳಿದರು.
ಮುದ್ರಾಡಿಯ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಕೊಡಮಾಡಿದ ಕ್ರೀಡಾ ಸಮವಸ್ತ್ರದ ವಿತರಣೆ ನಡೆಯಿತು. ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಣಿಪಾಲ ಎಂಐಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ರೂಪಶ್ರೀ, ಮುದ್ರಾಡಿ ಸಮೃದ್ಧಿಯ ಸುನೀಲ್, ಮುಖ್ಯಶಿಕ್ಷಕ ಚಂದ್ರಶೇಖರ ಭಟ್, ಶಿಕ್ಷಕರಾದ ಆನಂದ ಪಿ.ವಿ., ಶ್ಯಾಮಲಾ ಕೊಠಾರಿ, ಚಂದ್ರಕಾಂತಿ ಹೆಗ್ಡೆ, ಮಹೇಶ್ ಎಂ. ಉಪಸ್ಥಿತರಿದ್ದರು.
ಶಿಕ್ಷಕ ಮಹೇಶ ನಾಯ್ಕ ಕೆ. ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಘುಪತಿ ಹೆಬ್ಬಾರ್ ವಂದಿಸಿದರು.