

ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗ ನೇತೃತ್ವದಲ್ಲಿ ಜ್ಞಾನದೀಪ ವಿಶೇಷ ಅನುದಾನದಿಂದ ಮೀಯಪದವು ಶ್ರೀವಿದ್ಯಾವರ್ಧಕ ಪ್ರೌಢ ಶಾಲೆಗೆ 10 ಡೆಸ್ಕ್, ಬೆಂಚ್ ವಿತರಿಸಲಾಯಿತು.
ಶಾಲೆ ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದು, ಧರ್ಮ-ಜಾತಿಗೆ ಅತೀತವಾಗಿ ಮಾನವ ಕುಲದ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಜನಹಿತ ಯೋಜನೆ ಪರಿಚಯಿಸಿರುವುದು ಕೃತಜ್ಞತಾರ್ಹ ಎಂದು ಅಭಿಪ್ರಾಯಪಟ್ಟರು.
ಕಾಸರಗೋಡು ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಮಾತನಾಡಿ, ಧರ್ಮಸ್ಥಳದ ವಿವಿಧ ಯೋಜನೆ, ಡಾ.ವೀರೇಂದ್ರ ಹೆಗಡೆ ಅವರ ದೂರದೃಷ್ಟಿಗಳ ಜನೋಪಯೋಗಿ ಕೆಲಸ ಕಾರ್ಯ, ಕ್ಷೇತ್ರದಿಂದ ನೀಡುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಸುಂಕದಕಟ್ಟೆ ವಲಯ ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ, ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್ ಶುಭ ಹಾರೈಸಿದರು. ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಶ್ರೀಧರ ರಾವ್, ಒಕ್ಕೂಟ ಅಧ್ಯಕ್ಷ ಗೀತಾ ಲಕ್ಷ್ಮೀ, ಒಕ್ಕೂಟ ಪದಾಧಿಕಾರಿಗಳಾದ ಮೋನಪ್ಪ ಪೂಜಾರಿ, ಕಿರಣ್ ಬೆಜ್ಜ, ಸೇವಾ ಪ್ರತಿನಿಧಿಗಳಾದ ಮಮತಾ, ದೀಪಶ್ರೀ, ಶಾಲಾ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಕೃಷ್ಣ ಪ್ರಸಾದ್, ಹೈಯರ್ ಸೆಕೆಂಡರಿ ವಿಭಾಗ ಪ್ರಾಂಶುಪಾಲ ರಮೇಶ್, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಮೃದುಲಾ ಕೆ.ಎಂ ಸ್ವಾಗತಿಸಿದರು. ಕನ್ನಡ ಅಧ್ಯಾಪಕ ರಾಜಾರಾಮ ವಂದಿಸಿದರು. ಹಿಂದಿ ಅಧ್ಯಾಪಕ ಲಕ್ಷ್ಮೀಶ ಬೊಳುಂಬು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿ ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ ಅವರನ್ನು ಅಭಿನಂದಿಸಲಾಯಿತು.