ಹೊಸಬೆಳಕು ಸಂಸ್ಥೆಗೆ ದಿನಸಿ ಹಸ್ತಾಂತರ

hosabelaku
ಹೊಸಬೆಳಕು ಆಶ್ರಮಕ್ಕೆ ಬ್ರಹ್ಮಾವರ ಬಾರ್ಕೂರಿನ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ದಿನಸಿ ಹಸ್ತಾಂತರಿಸಲಾಯಿತು.
Published on

ಕೊಕ್ಕರ್ಣೆ: ಕಾರ್ಕಳ ಬೈಲೂರಿನ ಹೊಸಬೆಳಕು ಸೇವಾ ಟ್ರಸ್ಟ್ ವತಿಯಿಂದ ಮುನ್ನಡೆಸುತ್ತಿರುವ ಕುಟುಂಬದಿಂದ ಪರಿತ್ಯಜಿಸಲ್ಪಟ್ಟವರ ಆಶ್ರಮಕ್ಕೆ ಬ್ರಹ್ಮಾವರ ಬಾರ್ಕೂರಿನ ಲಯನ್ಸ್ ಮತ್ತು ಲಿಯೋ ಕ್ಲಬ್‌ನ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿದರು.

ಆಶ್ರಮದಲ್ಲಿ ವಾಸಿಸುತ್ತಿರುವ 180 ಮಂದಿಗೆ ಹಣ್ಣು, ದಿನಸಿ ಸಾಮಗ್ರಿ, ತರ್ಕಾರಿಗಳನ್ನು ಲಯನ್ಸ್ ಮತ್ತು ಲಿಯೋ ಕ್ಲಬ್ ಪದಾಧಿಕಾರಿಗಳು ನೀಡಿದರು.

ಜಯರಾಮ ನಾಯಕ್, ಸದಸ್ಯರಾದ ರಾಜೀವ ಆಳ್ವ, ಆನಂದ ಗಾಣಿಗ, ಪ್ರತಾಪ್ ಚಂದ್ರ ಶೆಟ್ಟಿ, ಜೋಸೆಫ್ ಬಾಂಜಿ, ಕೆ.ಆನಂದ ಶೆಟ್ಟಿ, ಅನಿಲ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು. ಆಶ್ರಮದ ನಿರ್ದೇಶಕ ತಮುಲ ಸ್ವಾಗತಿಸಿದರು. ಜಿ.ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಐವನ್ ಡೋನಾತ್ ಸುವಾರಿಸ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net