ವಿದ್ಯೆಗಳಲ್ಲಿ ಅಧ್ಯಾತ್ಮಿಕ ವಿದ್ಯೆ ಶ್ರೇಷ್ಠ: ಪುತ್ತಿಗೆ ಶ್ರೀ

puttige sri
Published on

 ಉಡುಪಿ: ಲೋಕದಲ್ಲಿರುವ ಅನೇಕ ವಿದ್ಯಾ ಪ್ರಕಾರಗಳಲ್ಲಿ ಅಧ್ಯಾತ್ಮಿಕ ವಿದ್ಯೆ ಶ್ರೇಷ್ಠವಾಗಿದ್ದು, ಜನ್ಮಜನ್ಮಾಂತರಕ್ಕೂ ಉಪಯೋಗವಾಗುತ್ತದೆ. 15 ವರ್ಷಗಳಷ್ಟು ದೀರ್ಕಾಲ ಲೌಕಿಕ ಶಿಕ್ಷಣ ಅಭ್ಯಾಸ ಮಾಡಿದರೂ ಶೇ.50ರಷ್ಟು ಭಾಗ ಉದ್ಯೋಗಕ್ಕೂ ಪ್ರಯೋಜವಾಗದೆ ಅನುಪಯುಕ್ತವಾಗಿದೆ. ಆದರೆ ಅಧ್ಯಾತ್ಮಿಕ ವಿದ್ಯೆ ಇಹ-ಪರದಲ್ಲೂ ಮಹತ್ವ ಪಡೆದಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕರ್ನಾಟಕ ಸಂಸತ ವಿಶ್ವವಿದ್ಯಾಲಯ ಹಾಗೂ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ಸಹಯೋಗದಲ್ಲಿ 2024ರ ಶೈಕ್ಷಣಿಕ ವರ್ಷದಲ್ಲಿ ನಡೆಸಲಾದ ಭಗವದ್ಗೀತಾ ಡಿಪ್ಲೊಮಾ ಮತ್ತು ದಾಸಸಾಹಿತ್ಯ ಡಿಪ್ಲೊಮಾ ಕೋರ್ಸ್​ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಆಶೀರ್ವಚನ ನೀಡಿದರು.

ಇಂದಿನ ಕಾಲಟ್ಟದಲ್ಲಿ ಯಾವುದೇ ಶಿಕ್ಷಣಕ್ಕೆ ಪ್ರಮಾಣಪತ್ರವಿಲ್ಲದಿದ್ದರೆ ಮಹತ್ವವೇ ಇಲ್ಲ. ಧಾರ್ಮಿಕ ಶಿಕ್ಷಣಕ್ಕೆ ಗುರುತಿಸುವಿಕೆ ಅಭಾವದಿಂದ ಓದಿದರೂ ಲವಿಲ್ಲವೆಂಬ ಭಾವನೆ ಜನರ ಮೂಡಿದೆ. ಈ ನ್ಯೂನ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಸಂಸತ ವಿವಿ ಮಾನ್ಯತೆಯೊಂದಿಗೆ ದಾಸಸಾಹಿತ್ಯ ಮತ್ತು ಭಗವದ್ಗೀತೆ ಕೋರ್ಸ್​ ಆರಂಭಿಸಲಾಗಿದೆ ಎಂದರು.

ಲಕ್ಷಕಂಠ ಗೀತಾ ಪಾರಾಯಣ

ಇತ್ತೀಚಿನ ದಿನಗಳಲ್ಲಿ ಹಿರಿಯರು ಹಾಗೂ ಹೊಸ ತಲೆಮಾರಿನ ಮಧ್ಯೆ ಅಂತರ ಹೆಚ್ಚುತ್ತಿದ್ದು, ಸಾಂಸತಿಕ ಸಂಬಂಧಗಳು ನಶಿಸುತ್ತಿವೆ. ಹೀಗಾಗಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಮುಂದಿನ ಗೀತಾ ಜಯಂತಿ ಸಂದರ್ಭದಲ್ಲಿ ಲಕ್ಷಕಂಠ ಗೀತಾ ಪಾರಾಯಣ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಗಳು 140 ಮಂದಿಗೆ ಪ್ರಮಾಣಪತ್ರ ವಿತರಿಸಿದರು. ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತಿರ್ಥ ಶ್ರೀಪಾದರು ಉಪಸ್ಥಿತರಿದ್ದರು. ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net