More

    ಪ್ರಸಾರ ಹಕ್ಕು ಖರೀದಿಗೆ ತ್ರಿಕೋನ ಸ್ಪರ್ಧೆ: ಭರ್ಜರಿ ಆದಾಯದ ನಿರೀಕ್ಷೆಯಲ್ಲಿ ಬಿಸಿಸಿಐ

    ನವದೆಹಲಿ: ಜೆರ್ಸಿ ಮತ್ತು ಶೀರ್ಷಿಕೆ ಪ್ರಾಯೋಜಕತ್ವ ಹಕ್ಕುಗಳ ಮಾರಾಟದಿಂದ ಭಾರಿ ಮೊತ್ತವನ್ನು ಖಜಾನೆಗೆ ತುಂಬಿಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾ ತವರಿನ ಸರಣಿಗಳ ಪ್ರಸಾರ ಹಕ್ಕು ಮಾರಾಟದಿಂದಲೂ ಭರ್ಜರಿ ಆದಾಯದ ನಿರೀಕ್ಷೆಯಲ್ಲಿದೆ. ಆದರೆ ಆಗಸ್ಟ್ 31ರಂದು ನಡೆಯಲಿರುವ ಇ-ಹರಾಜು ಪ್ರಕ್ರಿಯೆಗೆ ಕೇವಲ ಮೂರು ಪ್ರಸಾರಕರು ಟೆಕ್ನಿಕಲ್ ಬಿಡ್‌ಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.

    ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳಾದ ಅಮೆಜಾನ್, ಗೂಗಲ್ ಹಾಗೂ ಜೀ ವಾಹಿನಿ, ್ಯಾನ್ ಕೋಡ್ ಇ-ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿವೆ. ಮಾಧ್ಯಮ ಮತ್ತು ಡಿಜಿಟಲ್ ಹಕ್ಕುಗಳು ಪಡೆಯಲು ಸೋನಿ, ಡಿಸ್ನಿ ಸ್ಟಾರ್ ಹಾಗೂ ವಯಾಕಾಮ್18 ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಸೋಮವಾರ ಇ-ಬಿಡ್‌ಗಳ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಪ್ರಕ್ರಿಯೆಯಲ್ಲಿ ಅಮೆಜಾನ್, ಗೂಗಲ್ ಭಾಗವಹಿಸಿಲ್ಲ.

    ಮುಂದಿನ ಐದು ವರ್ಷದ ಅವಧಿಗೆ ತವರಿನಲ್ಲಿ ನಡೆಯಲಿರುವ ಪುರುಷ ಮತ್ತು ಮಹಿಳೆಯರ ದ್ವಿಪಕ್ಷೀಯ ಸರಣಿಗಳಿಗೆ ಇದೇ ಮೊದಲ ಬಾರಿಗೆ ಟಿವಿ ಹಾಗೂ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪ್ರತ್ಯೇಕಗೊಳಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 88 ಪಂದ್ಯಗಳು (25 ಟೆಸ್ಟ್, 27 ಏಕದಿನ, 36 ಟಿ20) ಭಾರತದಲ್ಲಿ ನಡೆಯಲಿವೆ. ಪ್ರತಿ ಪಂದ್ಯಕ್ಕೆ ಬಿಸಿಸಿಐ 45 ಕೋಟಿ ರೂ. (ಟಿವಿ ₹20 ಕೋಟಿ+ಡಿಜಿಟಲ್ ₹25 ಕೋಟಿ) ಮೂಲಬೆಲೆ ನಿಗದಿಪಡಿಸಿದ್ದು, 60 ಕೋಟಿ ರೂ.ಗೂ ಅಧಿಕ ಬಿಡ್ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

    ಟಿ20 ಪಂದ್ಯಗಳ ಬಗ್ಗೆ ಜನರು ಹೆಚ್ಚಿನ ಒಲವು ಹೊಂದಿರುವುದರಿಂದ ಬಿಸಿಸಿಐ ಪ್ರತಿ ಪಂದ್ಯಕ್ಕೆ 60 ಕೋಟಿ ರೂ. ನಿರೀಕ್ಷಿಸಿದ್ದು, ಪ್ರತಿ ಪಂದ್ಯಕ್ಕೆ 45 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಿದೆ. ಪುರುಷರ ಕ್ರಿಕೆಟ್ ಸರಣಿಗಳ ಪ್ರಸಾರ ಹಕ್ಕು ಖರೀದಿಸುವ ಸಂಸ್ಥೆ ಮಹಿಳಾ ಕ್ರಿಕೆಟ್ ಸರಣಿಗಳ ಹಕ್ಕನ್ನು ಪಡೆದುಕೊಳ್ಳಲಿದೆ. ಈ ಹಿಂದೆ ಐಪಿಎಲ್ ಬಿಡ್ಡಿಂಗ್‌ನಲ್ಲಿ ಮೂರು ವಾಹಿನಿಗಳು ಭಾಗವಹಿಸಿದ್ದು, ಆದರಲ್ಲಿ ಡಿಸ್ನಿ ಸ್ಟಾರ್ ಮತ್ತು ವಯಾಕಾಮ್-18 ಐಪಿಎಲ್ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts