

ಮುಂಬೈ: ಬಾಲಿವುಡ್ ನಟಿ ದಿಶಾ ಪಠಾನಿ ಎಲ್ಲಿಯೇ ಹೋದರೂ ಎಲ್ಲರ ಗಮನ ಸೆಳೆಯುತ್ತಾರೆ. ಸಿನಿಮಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ನಟಿ ಸಖತ್ ಆಕ್ಟೀವ್ ಆಗಿದ್ದಾರೆ. ರೀಸೆಂಟ್ ಆಗಿ ನಟಿ ಸಾಂಪ್ರದಾಯಿವಾದ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿದ್ದರು, ಫ್ಯಾನ್ಸ್ ಹಾಟ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪದೇ ಪದೇ ಹಾಟ್ ಫೋಟೋಸ್ ಹಾಕುವ ಮೂಲಕ ದಿಶಾ ಪಠಾನಿ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ನಟಿ ಈಗ ಬಂಗಾರ ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.
ಇವರಿಗೆ ಟ್ರೆಡಿಷನಲ್ ಮಾಡರ್ನ್ ಎಲ್ಲಾ ಒಂದೇ. ಎಂಥಾ ಬಟ್ಟೆ ಧರಿಸಿದರೂ ಎಕ್ಸ್ಪೋಸಿಂಗ್ ಆಗಿಯೇ ಡ್ರೆಸ್ ಮಾಡುತ್ತಾರೆ. ಅವರು ಹೊರಗೆ ಕಾಣಿಸಿಕೊಂಡಾಗೆಲ್ಲ ಅವರ ಫೋಟೋಸ್ ವೈರಲ್ ಆಗುತ್ತದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ದಿಶಾ ಪಠಾನಿ ಬೋಲ್ಡ್ ಫ್ಯಾಷನ್ ಸ್ಟೈಲ್ ಫಾಲೋ ಮಾಡುವ ಮಂದಿಯೂ ತುಂಬಾ ಇದ್ದಾರೆ.
ದಿಶಾ ಪಠಾನಿ ಪ್ರಭಾಸ್ ಅವರ ಕಲ್ಕಿ, ಸಿದ್ಧಾರ್ಥ್ ಮಲ್ಹೋತ್ರಾ ಅವರ ಯೋಧ, ಸೂರ್ಯ ಅವರ ಕಂಗುವ, ಮತ್ತು ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದಿಶಾ ಪಠಾನಿ ಟೈಗರ್ ಶ್ರಾಫ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಸುತ್ತಾಡುತ್ತಿದ್ದರು ಈ ಜೋಡಿ. ಆದರೆ ನಟಿ ಮದುವೆ ಬಗ್ಗೆ ಫೋಕಸ್ ಮಾಡಿದರೂ ನಟ ಕೆರಿಯರ್ ಮೇಲೆ ಫೋಕಸ್ ಮಾಡಿದ ಕಾರಣ ಈ ಜೋಡಿ ಬೇರ್ಪಟ್ಟರು ಎನ್ನಲಾಗಿದೆ.