ನಟಿ ಆಶಿಕಾ ರಂಗನಾಥ್​ಗೆ ಭಾರೀ ಮೆಚ್ಚುಗೆ; ತೆಲುಗು ನಿರ್ದೇಶಕ ಹೇಳಿದ್ದಿಷ್ಟು

ವಿಜಯವಾಣಿ - 2024-01-07T135510.046
Published on

ಆಂಧ್ರಪ್ರದೇಶ: ಸ್ಯಾಂಡಲ್​ವುಡ್​ನ ಮಿಲ್ಕಿ ಬ್ಯೂಟಿ ನಟಿ ಆಶಿಕಾ ರಂಗನಾಥ್ ಅಭಿನಯದ ಬಹುನಿರೀಕ್ಷಿತ ತೆಲುಗು ಸಿನಿಮಾ 'ನಾ ಸಾಮಿ ರಂಗ' ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಜನವರಿ 14, 2024ರಂದು ಸಂಕ್ರಾಂತಿ ಹಬ್ಬಕ್ಕೆ ತೆರೆ ಕಾಣಲಿದೆ. ಈ ಮಧ್ಯೆ ಚಿತ್ರದ ನಿರ್ದೇಶಕರು ಆಶಿಕಾರನ್ನು ಹಾಡಿ ಹೊಗಳಿರುವುದು ಅವರ ಅಭಿಮಾನಿಗಳಿಗೆ ಭಾರೀ ಸಂತಸ ತಂದಿದೆ.

ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲು ಸಜ್ಜಾಗಿರುವ ಸಾಲು ಸಾಲು ತೆಲುಗು ಸಿನಿಮಾಗಳ ಪೈಕಿ ಬಹುನಿರೀಕ್ಷಿತ ಚಿತ್ರಗಳಲ್ಲಿ 'ನಾ ಸಾಮಿ ರಂಗ' ಕೂಡ ಒಂದಾಗಿದೆ. ಸದ್ಯ ರಿಲೀಸ್​ನ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ವಿಜಯ್​ ಬಿನ್ನಿ, ನಟ ನಾಗಾರ್ಜುನ ಅಕ್ಕಿನೇನಿ ಅವರೊಂದಿಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಆಶಿಕಾ ಅವರ ನಟನೆಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ಕೆಲಸಗಳ ಬಗ್ಗೆ ಮಾತನಾಡುತ್ತಾ ಆಶಿಕಾ ಪಾತ್ರವನ್ನು ಮುನ್ನೆಲೆಗೆ ತಂದ ಯುವ ನಿರ್ದೇಶಕರು, ಸಿನಿಮಾದಲ್ಲಿ ಆಶಿಕಾ ಅದ್ಭುತವಾದ ಕೆಲಸ ಮಾಡಿದ್ದಾರೆ ಹಾಗೂ ಖಂಡಿತ ಪ್ರೇಕ್ಷಕರನ್ನು ಮೆಚ್ಚಿಸುತ್ತಾರೆ. ಇದರೊಟ್ಟಿಗೆ ಚಿತ್ರ ಬಿಡುಗಡೆಗೊಂಡ ಬಳಿಕ ಅವರು ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿದ್ದು. ಮುಂದಿನ ದಿನಗಳಲ್ಲಿ ಹೆಚ್ಚು ಬ್ಯುಸಿಯಾಗುತ್ತಾರೆ ಎಂದು ಹೇಳಿದ್ದಾರೆ.

ಹಳ್ಳಿಯ ಸಾಹಸಮಯ ಚಿತ್ರವಾಗಿರುವ 'ನಾ ಸಾಮಿ ರಂಗ'ಕ್ಕೆ ಆಸ್ಕರ್​ ಪ್ರಶಸ್ತಿ ಪಡೆದ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದ್ದು, ಈ ಚಿತ್ರದಲ್ಲಿ ಅಲ್ಲರಿ ನರೇಶ್ ಮತ್ತು ರಾಜ್ ತರುಣ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net