ನಿರ್ದೇಶಕ ಎಸ್​ ನಾರಾಯಣ್​ಗೆ ಪುತ್ರನಿಂದಲೇ ಆ್ಯಕ್ಷನ್​ ಕಟ್​; ಇದು ‘ನವಮಿ 9.9.1999' ಚಿತ್ರದ ವಿಶೇಷ

WhatsApp Image 2020-12-27 at 3.49.09 PM
Published on

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್ ನಾರಾಯಣ್ 'ನವಮಿ 9.9.1999' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ದೆಶಕರು ಪವನ್ ಎಸ್ ನಾರಾಯಣ್. ಮಗನ ನಿರ್ದೇಶನದಲ್ಲಿ ಅಪ್ಪ ಅಭಿನಯಿಸಿರುವುದು 'ನವಮಿ 9.9.1999' ಚಿತ್ರದ ವಿಶೇಷ.

ಎಸ್.ನಾರಾಯಣ್ ಈ ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.‌ ಫೈಟ್ ಹಾಗೂ ಹಾಡುಗಳ ಚಿತ್ರೀಕರಣ ‌ಬಾಕಿಯಿದೆ. ಬೆಂಗಳೂರು, ಶಿವಗಂಗೆ, ಸಕಲೇಶಪುರದಲ್ಲಿ 40 ದಿನಗಳ ಚಿತ್ರೀಕರಣ ನಡೆದಿದೆ. ಉತ್ಸುಕ ನವ ಯುವಕರ ತಂಡವೊಂದು ಲಾಕ್ ಡೌನ್ ದಿನಗಳಲ್ಲಿ ಕಥೆ ಬರೆದಿದ್ದು, ಪವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತಂದೆ ಗರಡಿಯಲ್ಲಿ ಪಳಗಿರುವ ಪವನ್ ಈಗ ಸ್ವತಂತ್ರ ನಿರ್ದೇಶಕನಾಗಿ ಈ ಸಿನಿಮಾದ ಮುಖಾಂತರ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರದ ನಾಯಕ ನಟ ಯಶಸ್ ಅಭಿ. ಹಿಂದೆ 'ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್' ಹಾಗೂ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರಗಳಲ್ಲಿ ‌ನಟಿಸಿದ್ದಾರೆ. ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನಹಳ್ಳಿ ಒಟ್ಟಿಗೆ ಚಿತ್ರಕತೆ ರಚಿಸಿ, ಪದ್ಮ ಸುಂದರಿ ಕ್ರಿಯೇಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಂದಿನಿ ಗೌಡ ಈ ಚಿತ್ರದ ನಾಯಕಿ.

ಎಸ್.ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್ ಕುಮರ್ ಜಿ.ಎಂ, ಅನುಶ್ರಿ, ಪವಿತ್ರ, ಕುರಿಬಾಂಡ್ ಸುನೀಲ್, ಅರುಣ ಬಾಲರಾಜ್ ಮುಂತಾದವರು ಈ‌ ಚಿತ್ರದ ತಾರಾಬಳಗದಲ್ಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಪಿ.ಕೆ.ಎಚ್.ಎಸ್ ರವರ ಛಾಯಾಗ್ರಹಣ, ಗಿರಿಧರ್ ದಿವಾನ್ ರವರ ಸಂಗೀತ ನಿರ್ದೇಶನ, ನಾಗಾರ್ಜುನ್ ಶರ್ಮ ಅವರ ಸಾಹಿತ್ಯ, ಮಾಸ್ ಮಾದ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ಹಾಗೂ ಮೋಹನ್ ರವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.

ಶಶಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಾಹಿಸುತ್ತಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಒಂಭತ್ತು ನಿರ್ದೇಶಕರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದರು. ಲೋಕೇಶನ್ ಸ್ಪಾನ್ಸರ್ ಜಿ.ಎನ್.ನರಸಿಂಹಯ್ಯ ಅವರಿಗೆ ಚಿತ್ರತಂಡ ವಿಶೇಷ ಅಭಿನಂದನೆ ಸಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net