

ನಟ ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ನಾಲ್ಕು ಶಾಲೆಗಳನ್ನು ದತ್ತು ಪಡೆದು ಸುದ್ದಿಯಲ್ಲಿದ್ದರು. ಅದೇ ರೀತಿ ಅನಾರೋಗ್ಯ ಪೀಡಿತ ಮಗುವಿನ ಬೆನ್ನಿಗೂ ನಿಂತಿದ್ದರು. ಲಾಕ್ಡೌನ್ ಅವಧಿಯಲ್ಲಿ ಎಷ್ಟೋ ಸಂಘಟನೆಗಳಿಗೆ ನೆರವಿನ ಹಸ್ತ ಚಾಚಿದ್ದರು. ಹೀಗೆ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ ಸುದೀಪ್ ಲಾಕ್ಡೌನ್ ಅವಧಿಯಲ್ಲಿಯೂ ಸುದ್ದಿಯಲ್ಲಿದ್ದರು. ಅದೇ ರೀತಿ ಸಿನಿಮಾಮಂದಿಗೂ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ ಕಿಚ್ಚ.
ಇಷ್ಟೆಲ್ಲ ಹೇಳಲು ಕಾರಣ ನೊಕಿಯಾ ಕಮ್ಯೂನಿಕೇಟರ್ ಹ್ಯಾಂಡ್ಸೆಟ್!
ಹೌದು, 2005 ರ ಸಮಯದಲ್ಲಿ ನಿರ್ದೇಶಕ ರಘುರಾಮ್ಗೆ ಕಿಚ್ಚ ಸುದೀಪ್ ಫೋನ್ವೊಂದನ್ನು ಕೊಡಿಸಿದ್ದರು. ಅದುವೇ ನೊಕಿಯಾ ಕಮ್ಯೂನಿಕೇಟರ್ ಹ್ಯಾಂಡ್ಸೆಟ್. ಆವತ್ತು ಕೊಡಿಸಿದ್ದ ಆ ಫೋನಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ರಘುರಾಮ್, ‘ಜಮಾನದಲ್ಲೇ ಉಡುಗೊರೆಯಾಗಿ ಕೊಟ್ಟು ಕಾಸ್ಟ್ಲಿ ಫೋನ್ನನ್ನ.. ಪ್ರತಿಯೊಬ್ಬ ಸ್ನೇಹಿತರಿಗೂ ಹೇಳಿಕೊಟ್ಟರು ಪ್ರೀತಿನ ಪ್ರೀತಿಯಿಂದ ಪ್ರೀತ್ಸಿ ಅನ್ನೋದನ್ನ.. 15 ವರ್ಷದ ಹಿಂದೆ ಕಿಚ್ಚ ಸುದೀಪ್ ಸರ್ ನೀಡಿದ ಕಾಣಿಕೆ..’ ಎಂದು ರಘುರಾಮ್ ಬರೆದುಕೊಂಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸುದೀಪ್ ಹೈದರಾಬಾದ್ನತ್ತ ಪ್ರಯಾಣ ಬೆಳೆಸಿದ್ದು, ಫ್ಯಾಂಟಮ್ ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ. ರಘುರಾಮ್ ಸಹ ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.