ಇಂಡಿಯನ್​ 2 ವೀಕ್ಷಿಸಿ ಕಮಲ್​ ಹಾಸನ್​​​ ನಟನೆಗೆ ನಿರ್ದೇಶಕ ಲೋಕೇಶ್​ ಕನಕರಾಜ್​​ ಹೇಳಿದ್ದೇನು ಗೊತ್ತಾ?

Untitled-design-2024-07-14T165136.877
Published on

ಚೆನ್ನೈ: ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಇಂಡಿಯನ್​​ 2 ಕೂಡ ಒಂದು. ಚಿತ್ರದಲ್ಲಿ ಕಮಲ್​ ಹಾಸನ್​​​​ ಅವರು ಕಮಾಂಡರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಶುಕ್ರವಾರ (ಜುಲೈ 12) ಬಿಡುಗಡೆಗೊಂಡ ಇಂಡಿಯನ್​ 2 ಚಿತ್ರಿಕ್ಕೆ ಸಿನಿಮಾ ಅಭಿಮಾನಿಗಳಿಂದ ಹಾಗೂ ಸಿನಿಮಾ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಲೋಕೇಶ್​​ ಕನಕರಾಜ್​​​​ ಅವರು ಕೂಡ ಸಿನಿಮಾವನ್ನು ನೋಡಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಿನಿಮಾದಲ್ಲಿ ಉಲಗನಾಯಗನ್ ಕಮಲ್​ ಹಾಸನ್​​​ ನಟನ ಸಮರ್ಪಣೆಯನ್ನೂ ಶ್ಲಾಘಿಸಿ​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ್ದಾರೆ. ಲೋಕೇಶ್​​ ಕನಕರಾಜ್​ ಮತ್ತು ಕಮಲ್​ ಹಾಸನ್​​ ಈ ಜೋಡಿ 2022ರಲ್ಲಿ ಬಿಡುಗಡೆಯಾದ ವಿಕ್ರಮ ಸಿನಿಮಾದಲ್ಲಿ ಕೆಲಸ ಮಾಡಿತ್ತು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಗಳಿಸಿತ್ತು.

ಇಂಡಿಯನ್​ 2 ಸಿನಿಮಾ ವೀಕ್ಷಿಸಿ, ಕಮಲ್​ ಹಾಸನ್​ ಸರ್​ ಅವರ ನಟನೆಯೂ ಕಲೆಯ ಬಗೆಗೆ ಅವರಿಗಿರುವ ಸಮರ್ಪಣೆಯನ್ನು ತೋರಿಸುತ್ತದೆ. ಅನಿರುದ್ಧ್​ ಅವರ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಇಂಥಾ ಸಿನಿಮಾ ನಿರ್ಮಿಸಿದ ಶಂಕರ್ ಷಣ್ಮುಘ್​​ ಸರ್ ಅವರಿಗೆ ಅಭಿನಂದನೆಗಳು ಹೇಳಿ. ಇಂಡಿಯನ್​ ಸಿನಿಮಾ ಮುಂದಿನ ಭಾಗವನ್ನು ನೋಡಲು ಕಾಯಲು ಸಾಧ್ಯವಿಲ್ಲ ಎಂದು ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇಂಡಿಯನ್​ 3 ಸಿನಿಮಾ 2025ರಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಸೇನಾಪತಿಯ ತಂದೆಯ ಕಥೆಯನ್ನು ನೋಡುತ್ತೇವೆ. ಕಮಲ್ ಹಾಸನ್ ಸೇನಾಪತಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜತೆಗೆ ಕಾಜಲ್ ಅಗರ್ವಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಡಿಯನ್​ 2 ಸಿನಿಮಾದ ಕೊನೆಯಲ್ಲಿ ಇಂಡಿಯನ್ 3 ಟೀಸರ್ ಕೂಡ ಬಿಡುಗಡೆಯಾಗಿದೆ. ಟೀಸರ್​​​ನಲ್ಲಿ ಚಿತ್ರದಲ್ಲಿ ಸೇನಾಪತಿಯ ಪಾತ್ರದ ತಂದೆಯ ಕಥೆಯನ್ನು ಪ್ರೇಕ್ಷಕರಿಗೆ ಹೇಗೆ ತೋರಿಸಲಿದ್ದಾರೆ ಹಾಗೂ ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಒಳಗೊಂಡಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಇಂಡಿಯನ್​ 2 ಸಿನಿಮಾದಲ್ಲಿ ಕಮಲ್ ಹಾಸನ್ ಜತೆಗೆ ರಾಕುಲ್​​ ಪ್ರೀತ್ ಸಿಂಗ್, ಸಿದ್ಧಾರ್ಥ್, ಪ್ರಿಯಾ ಭವಾನಿ ಶಂಕರ್, ಬ್ರಹ್ಮಾನಂದಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net