ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ಬೆಂಗಳೂರಿನ ಕಾಂಕ್ರೀಟ್ ಕಾಡಿನ ನಡುವೆ ನೈಸರ್ಗಿಕ ಕಾಡನ್ನೊಳಗೊಂಡಿರುವ ಬೆಟ್ಟವೊಂದು ನಗರೀಕರಣದ ನಡುವೆಯೂ ಆಸಕ್ತರನ್ನು ಸೆಳೆಯುತ್ತಿದೆ.
ಬೆಂಗಳೂರಿನ ಎಜಿಎಸ್ ಲೇಔಟ್‌ನಲ್ಲಿರುವ ಅರೇಹಳ್ಳಿ ಶ್ರೀಹನುಮಗಿರಿ ಬೆಟ್ಟದಲ್ಲಿರುವ ಅರ್ಕೇಶ್ವರ ಹಾಗೂ ವೀರಾಂಜನೇಯ ದೇವಸ್ಥಾನವಿದ್ದು, ನ.15ಕ್ಕೆ ಕಾರ್ತೀಕ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ತಿರುವಣ್ಣಾಮಲೈ ದೇವಸ್ಥಾನದ ಅರ್ಚಕರು ಇಲ್ಲಿನ ಬೆಟ್ಟದಲ್ಲಿ ಶಿವನಪಾದ ಇರೋದು ಗುರುಗಿಸಿದ್ದು, ಈ ಪ್ರಯುಕ್ತ ಇದೇ ಮೊದಲ ಬಾರಿಗೆ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿದೆ. ದೀಪೋತ್ಸವಕ್ಕಾಗಿ ತಿರುವಣ್ಣಾಮಲೈನಲ್ಲಿ ಬೃಹತ್ ದೀಪ ತಯಾರಾಗುತ್ತಿದ್ದು, ಕಾರ್ಯಕ್ರಮದ ಹೊತ್ತಿಗೆ ಹೊಸ ದೀಪ ಬರಲಿದೆ.
ದೀಪೋತ್ಸವ ಕಾರ್ಯಕ್ರಮದಲ್ಲಿ ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಓಂಕಾರಾಶ್ರಮದ ಶ್ರೀ ಮಧುಸೂದನಂದಾಪುರಿ ಸ್ವಾಮೀಜಿ, ಗದಗ ರಾಮಕೃಷ್ಣ ಮಠದ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.
ಚಿತ್ರಕಲಾ ಪರಿಷತ್‌ನಲ್ಲಿ ರೋರಿಚ್ ಪೇಟಿಂಗ್ಸ್ ಪ್ರದರ್ಶನ; ನಿಕೋಲಸ್ ರೋರಿಚ್ 150ನೇ ಜನ್ಮದಿನ