

ಮೇಷ: ಹಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಜಾಗರೂಕರಾಗಿರಿ. ಸಣ್ಣ ಆರೋಗ್ಯ ಸಮಸ್ಯೆ. ಕೈಗೊಂಡ ಕೆಲಸ ನಿಧಾನವಾಗಿ ಸಾಗುತ್ತದೆ. ಶುಭಸಂಖ್ಯೆ:5
ವೃಷಭ: ಆರ್ಥಿಕ ಪ್ರಗತಿ. ಸಾಲ ತೀರಿಸಿ ನಿರಾಳವಾಗುವಿರಿ. ಬೆಲೆಬಾಳುವ ವಸ್ತು, ವಾಹನ ಖರೀದಿಗೆ ನಿರ್ಧಾರ. ಐಟಿ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 9
ಮಿಥುನ: ವೃತ್ತಿಪರ ಉದ್ಯೋಗಗಳಲ್ಲಿ ಅನುಕೂಲ. ಹೊಸ ಮನೆ ನಿರ್ವಿುಸುವ ಯತ್ನ ವಿಫಲ. ಸ್ಥಿರಾಸ್ತಿ ಮಾರಾಟ ನಿಧಾನವಾಗುತ್ತದೆ. ಶುಭಸಂಖ್ಯೆ:2
ಕಟಕ: ಬಂಧು -ಮಿತ್ರರಿಂದ ವಿವಾದ ಸಂಬಂಧೀ ಮಾಹಿತಿ ಲಭ್ಯ. ಭೂ ವ್ಯವಹಾರ ಲಾಭ ತರಲಿದೆ. ಮಕ್ಕಳ ಶಿಕ್ಷಣದತ್ತ ಗಮನಹರಿಸಿ. ಶುಭಸಂಖ್ಯೆ: 7
ಸಿಂಹ: ಸ್ನೇಹಿತರಿಂದ ಶುಭ ಕಾರ್ಯಕ್ರಮಕ್ಕೆ ಆಹ್ವಾನ ಬರಲಿದೆ. ಆರ್ಥಿಕ ಸ್ಥಿತಿ ಅನುಕೂಲಕರ. ವೃತ್ತಿಪರ ವ್ಯವಹಾರಗಳು ಲಾಭ ತರಲಿವೆ. ಶುಭಸಂಖ್ಯೆ: 1
ಕನ್ಯಾ: ಸೇವಾ ಚಟುವಟಿಕೆಯಲ್ಲಿ ಭಾಗವಹಿಸುತ್ತೀರಿ. ಹೊಸ ವ್ಯವಹಾರದ ಆರಂಭಿಸುತ್ತೀರಿ. ದೀರ್ಘಾವಧಿಯ ಸಾಲ ತೀರಿಸಲು ಪ್ರಯತ್ನ. ಶುಭಸಂಖ್ಯೆ: 8
ತುಲಾ: ನಿರುದ್ಯೋಗಿಗಳಿಗೆ ಹೊಸಅವಕಾಶ. ಸ್ನೇಹಿತರೊಂದಿಗಿನ ವಿವಾದಕ್ಕೆ ಅಂತ್ಯ. ದೂರ ಪ್ರಯಾಣ ಮುಂದೂಡುವುದು ಉತ್ತಮ. ಶುಭಸಂಖ್ಯೆ: 9
ವೃಶ್ಚಿಕ: ಮಗನ ವಿವಾಹ ಕಾರ್ಯಕ್ರಮದ ಪ್ರಸ್ತಾಪವಾಗುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಶುಭಸಂಖ್ಯೆ:1
ಧನುಸ್ಸು: ಸೇವೇಯಿಂದ ಮನ್ನಣೆ. ವೃತ್ತಿಪರ ಕೋರ್ಸಗಳಲ್ಲಿ ಯಶ. ದೂರದಲ್ಲಿರುವ ಮಕ್ಕಳಿಂದ ಶುಭ. ನಿರುದ್ಯೋಗಿಗಳ ಯತ್ನಕ್ಕೆ ಜಯ. ಶುಭಸಂಖ್ಯೆ: 4
ಮಕರ: ಹಳೇಸಾಲ ತೀರಿಸಲು ಸಾಧ್ಯವಾಗುತ್ತದೆ. ಕುಟುಂಬ ಸಮಸ್ಯೆ ಎದುರಿಸುವ ಶಕ್ತಿ ಬರಲಿದೆ. ಆಸ್ತಿ ವಿಚಾರದಲ್ಲಿ ಸ್ವಂತ ನಿರ್ಧಾರ ಲೇಸು. ಶುಭಸಂಖ್ಯೆ: 2
ಕುಂಭ: ಸ್ನೇಹಿತರೊಂದಿಗೆ ಮನಸ್ತಾಪ. ಹೆತ್ತವರ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೆಲಸ ವಿಳಂಬವಾದರೂ ಪೂರ್ಣಗೊಳ್ಳುತ್ತದೆ. ಶುಭಸಂಖ್ಯೆ:3
ಮೀನ: ಕೃಷಿ ಚಟುವಟಿಕೆಗಳಲ್ಲಿ ಸಮಾಧಾನ. ಹಳೆಯ ಘಟನೆ ಮರುಕಳಿಸಲಿದೆ. ಶುಭ ಕಾರ್ಯಕ್ಕೆ ಖರ್ಚು. ಸೀರೆ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:3