

ಮುಂಬೈ: ಬುಧವಾರ ನಿಧನರಾದ ದಿಲೀಪ್ ಕುಮಾರ್, ಚಿತ್ರರಂಗದಲ್ಲಿ 'ಟ್ರಾಜಿಡಿ ಕಿಂಗ್' ಎಂದೇ ಹೆಸರಾಗಿದ್ದವರು. ಕಾರಣ, ಅವರು ಅಭಿನಯಿಸಿದ ಬಹಳಷ್ಟು ಚಿತ್ರಗಳಲ್ಲಿ ದುರಂತನಾಯಕನಾಗಿ ಅವರು ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
'ದೇವದಾಸ್' ಚಿತ್ರದಿಂದ ಪ್ರಾರಂಭವಾದ ಈ ದುರಂತನಾಯಕನ ಪರ್ವ, ನಂತರದ ವರ್ಷಗಳಲ್ಲಿ ಹಲವು ಚಿತ್ರಗಳಲ್ಲಿ ಮುಂದುವರೆಯಿತು. 'ಮೊಘಲ್-ಎ-ಆಜಮ್', 'ದೀದಾರ್', 'ಸಂಗ್ದಿಲ್', 'ಅಂದಾಜ್', 'ತರಾನಾ', 'ಯಹೂದಿ', 'ಬಾಬುಲ್', 'ಮೇಲಾ', 'ಗಂಗ ಜಮುನಾ' ಮುಂತಾದ ಚಿತ್ರಗಳಲ್ಲಿ ದಿಲೀಪ್ ಕುಮಾರ್ ಅವರು ದುರಂತನಾಯಕನಾಗಿ ಕಾಣಿಸಿಕೊಂಡರು. ಮಧ್ಯೆಮಧ್ಯೆ, 'ರಾಮ್ ಔರ್ ಶ್ಯಾಮ್', 'ಗೋಪಿ', 'ಲೀಡರ್' ಮುಂತಾದ ಚಿತ್ರದಗಳಲ್ಲಿ ನಟಿಸಿದರಾದರೂ, ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ದುರಂತ ನಾಯಕನ ಪಾತ್ರಗಳೇ. ಅದೇ ಕಾರಣಕ್ಕೆ ಅವರಿಗೆ 'ಟ್ರಾಜಿಡಿ ಕಿಂಗ್ ಆಫ್ ಇಂಡಿಯನ್ ಸಿನಿಮಾ' ಎಂದು ಕರೆಯಲಾಗುತ್ತಿತ್ತಂತೆ.
ಇದನ್ನೂ ಓದಿ: ಬಾಲಿವುಡ್ನ ಹಿರಿಯ ನಟ ದಿಲೀಪ್ ಕುಮಾರ್ ನಿಧನ
ದುರಂತ ಪಾತ್ರಗಳಲ್ಲಿ ಸತತವಾಗಿ ನಟಿಸಿ, ಅವರು ಒಂದು ಹಂತದಲ್ಲಿ ಡಿಪ್ರೆಶನ್‌ಗೆ ಸಹ ಒಳಗಾಗಿದ್ದರು ಎಂದು ಹೇಳಲಾಗುತ್ತದೆ. ಕ್ರಮೇಣ ಅದರಿಂದ ಆಚೆ ಬಂದ ಅವರು, ನಂತರದ ವರ್ಷಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು.