

ಬಂಟ್ವಾಳ: ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಬಂಟ್ವಾಳ ಆಡಳಿತ ಸೌಧದಲ್ಲಿ ಶಾಸಕ ರಾಜೇಶ್ ನೈಾಕ್ ಸೋಮವಾರ ಚಾಲನೆ ನೀಡಿದರು. ತಹಸೀಲ್ದಾರ್ ಅರ್ಚನಾ ಭಟ್ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಶಾಸಕರಿಗೆ ನೀಡಿದರು. ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು, ಉಪತಹಸೀಲ್ದಾರ್‌ಗಳಾದ ನರೇಂದ್ರನಾಥ್, ನವೀನ್ ಬೆಂಜನಪದವು, ದಿವಾಕರ, ಕಂದಾಯಾಧಿಕಾರಿಗಳಾದ ಸೀತಾರಾಮ ಕಮ್ಮಜೆ, ಜನಾರ್ದನ ಉಪಸ್ಥಿತರಿದ್ದರು.