More

    ಮಕ್ಮಲ್ ಟೋಪಿ ಹಾಕಲು ಕಾಂಗ್ರೆಸ್ ಸಿದ್ಧತೆ; ಬಿ.ಎಲ್.ಸಂತೋಷ

    ಗಂಗಾವತಿ: ಅಧಿಕಾರಕ್ಕಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ತೋರಿಸುತ್ತಿದೆ. ಇನ್ನೊಂದು ಕೈಯಲ್ಲಿ ಮಕ್ಮಲ್ ಟೋಪಿ ಇಟ್ಟುಕೊಂಡು ಜನರಿಗೆ ಹಾಕಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಚುನಾವಣೆ ಪ್ರಣಾಳಿಕೆ ಇದುವರೆಗೂ ಜಾರಿಗೊಳಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳಿದರು.


    ತಾಲೂಕಿನ ಮರಳಿ ರಿಯಲ್ ರಿಚ್ ಕೌಂಟಿ ಸಭಾಂಗಣದಲ್ಲಿ ಬಿಜೆಪಿ ಮಾಧ್ಯಮ ಪ್ರಕೋಷ್ಠದಿಂದ ಭಾನುವಾರ ಆಯೋಜಿಸಿದ್ದ ಬಳ್ಳಾರಿ ವಿಭಾಗದ ಮಟ್ಟದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದರು. ಮತಾಂತರ, ಗೋಹತ್ಯೆ ಸಮರ್ಥಿಸಿಕೊಳ್ಳುವ ಕಾಂಗ್ರೆಸ್, ಟಿಪ್ಪುಸುಲ್ತಾನ್‌ಗೆ ನೀಡಿದಷ್ಟು ಗೌರವ ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ನೀಡಿಲ್ಲ. ಯಾವುದೇ ಭರವಸೆ ನೀಡದೆ ಜನರಿಗೆ ಬೇಕಿರುವ ಯೋಜನೆಗಳನ್ನು ಜಾರಿಗೆ ತರುವುದು ಬಿಜೆಪಿಯ ಕಾರ್ಯಸೂಚಿ. ಜನರ ವಿಶ್ವಾಸ ಮತ್ತು ನಂಬಿಕೆ ಮೂಲಕ 2023 ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿದೆ. ಅಹಂಕಾರದಿಂದ ರಾಜಕೀಯ ಮಾಡುವರರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮಣ್ಣು ಮುಕ್ಕಿಸಿದ್ದಾರೆ ಎಂದರು.


    ಡಿಜಿಟಲ್ ಮಾಧ್ಯಮವನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಆ ಮೂಲಕ ಪಕ್ಷದ ಸಾಧನೆ ತಿಳಿಸುತ್ತಾ ಜನರಿಗೆ ಹತ್ತಿರವಾಗಿದೆ. ಡಿಜಿಟಲ್ ಸಂವಹನದಿಂದ ಪಕ್ಷದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಲು ಸಾಧ್ಯವಾಗಿದೆ. ವ್ಯಾಟ್ಸಾೃಪ್, ೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ಯುಟೂಬ್ ಅನ್ನು ಕಾರ್ಯಕರ್ತರು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ವೈಯಕ್ತಿಕ ವಿಚಾರ ಅಪ್‌ಲೋಡ್‌ಗಿಂತ ಸಾಧನೆಗಳನ್ನು ಪ್ರಚಾರ ಮಾಡಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಮೇಲಿಂದ ಮೇಲೆ ಪ್ರಚುರಪಡಿಸಬೇಕಿದ್ದು, ಮಾಧ್ಯಮ ವಿಭಾಗ ಸಕ್ರಿಯರಾಗಬೇಕಿದೆ. ಅಭ್ಯರ್ಥಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಪಕ್ಷಕ್ಕಾಗಿ ದುಡಿಯಿರಿ ಎಂದರು.


    ಸಚಿವರಾದ ಆನಂದಸಿಂಗ್, ಕೆ.ಹಾಲಪ್ಪ ಆಚಾರ್, ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಗೌಡ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಮಾಜಿ ಶಾಸಕರಾದ ಜಿ.ವೀರಪ್ಪ, ಕೆ.ಶರಣಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿದ್ದೇಶ, ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಇತರರಿದ್ದರು. ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಿದ್ದರು.

    ಗುಂಡಿಗೆಯೂ ಇಲ್ಲ, ಗಂಡಸ್ತನನೂ ಇಲ್ಲ
    ಸರ್ಜಿಕಲ್ ಸ್ಟ್ರೈಕ್ ಮೂಲಕ ಗುಂಡಿಗೆ ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಗುಂಡಿಗೆಯ ಗಂಡು ಆಗಿದ್ದಾರೆ. ಕಾಂಗ್ರೆಸ್‌ನವರಿಗೆ ಗುಂಡಿಗೇನೂ ಇಲ್ಲ, ಗಂಡಸ್ತನನೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯನ್ನು ಮಾಡಿದ್ದು ಗಂಡದೆಯ ಗುಂಡು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ. ಬಳ್ಳಾರಿ ನಕ್ಷೆಯಿಂದ ವಿಜಯನಗರ ತೆಗೆದು ಹೊಸ ಜಿಲ್ಲೆ ಮಾಡಿದ್ದಾರೆ. ದಿಲ್ಲಿಯಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣ ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿದ್ದು, ಸಾಮಾನ್ಯ ಕಾರ್ಯಕರ್ತನಿಗೂ ಮನಮುಟ್ಟುವಂತೆ ವಿವರಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಗಿದ ಅಧ್ಯಾಯ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಂತ್ಯವಾಗಲಿದ್ದು, ಬಿಜೆಪಿ ವಿಜಯ ಬಾವುಟ ಹಾರಿಸಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts